ಬೆಳಗಾವಿ: ಉಮೇಶ್ ಕತ್ತಿಗೆ ಬದುಕಿರೋವರೆಗೆ ಒಮ್ಮೆ ಆದ್ರೂ ಸಿಎಂ ಆಗಬೇಕು ಅನ್ನುವ ಆಸೆ ಇದೆ. ಅದಕ್ಕೆ ತಾನೂ ಸಿಎಂ ಆಗಬೇಕು ಅಂತಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿಂದು ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಪಕ್ಷವೇ ಬಯಸಿ ಬೊಮ್ಮಾಯಿಯವರನ್ನ ಸಿಎಂ ಮಾಡಿದೆ. ಬದಲಾವಣೆ ಮಾಡೋ ವಿಚಾರ ಸದ್ಯ ಸರ್ಕಾರ ಮುಂದಿಲ್ಲ. ಸಿಎಂ ಬದಲಾವಣೆ ವಿಚಾರ ಸದ್ಯಕ್ಕೆ ಅಪ್ರಸ್ತುತ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ನಾವೆಲ್ಲಾ ಸಚಿವರು, ನಮಗೆ ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ: ನಿತಿನ್ ಗಡ್ಕರಿ
Advertisement
Advertisement
ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಕಾಂಗ್ರೆಸ್ ಪಕ್ಷದ ನಾಯಕರಿಗೆ ಆಗುತ್ತಿಲ್ಲ. ಹೀಗಾಗಿ ಸುಳ್ಳು ಆರೋಪ ಮಾಡೋದು ಅವರ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿಗೆ ಕೊರೊನಾ – ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಪಾಸಿಟಿವ್
Advertisement
Advertisement
ಕಾಂಗ್ರೆಸ್‌ನವರಿಗೆ ಬುದ್ದಿ ಭ್ರಮಣೆ ಆಗಿದೆ. ಸುಳ್ಳು ಆರೋಪ ಮಾಡೋದು ಅವರ ಕೆಲಸ ಆಗಿದೆ. 40 ಪರ್ಸೆಂಟ್ ಕಮಿಷನ್ ಅಂತ ಎಲ್ಲರೂ ಆರೋಪ ಮಾಡುತ್ತಾರೆ. ಒಂದು ಕೇಸ್ ಇದ್ರೂ ಕಾನೂನು ಕ್ರಮ ವಹಿಸುವ ಬಗ್ಗೆ ಹೇಳಿದ್ದೇವೆ. ಇವತ್ತಿನವರೆಗೆ ಯಾವುದೇ ದಾಖಲೆ ಕೊಟ್ಟಿಲ್ಲ. ಕಾಂಗ್ರೆಸ್ ಪ್ರೇರಣೆಯಿಂದಲೇ ಕಮಿಷನ್ ಆರೋಪ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಸಣ್ಣ ಸಮುದಾಯಗಳಿಗೂ ಮೋದಿ ನಾಯಕ: ಟೆಂಡರ್ ಪರಿಶೀಲನೆಗೆ ಓರ್ವ ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಅಂತಹ ಕೆಲಸ ಕಾಂಗ್ರೆಸ್ ಅಧಿಕಾರದಲ್ಲಿ ಯಾವತ್ತೂ ಮಾಡಲಿಲ್ಲ. ಲೋಕಾಯುಕ್ತ ಮೊಟಕುಗೊಳಿಸಿ ಎಸಿಬಿ ತಂದು ಭ್ರಷ್ಟಾಚಾರ ಮುಚ್ಚಿ ಹಾಕಿದ್ರು. ದೇಶ ಇಬ್ಬಾಗ ಆಗಲು ಕಾಂಗ್ರೆಸ್ ನಾಯಕರೇ ಹೊಣೆಯಾಗಿದ್ದಾರೆ. ಜಿನ್ನಾ ಜೊತೆಗೆ ಕೈ ಜೋಡಿಸಿದ್ದು ಕಾಂಗ್ರೆಸ್ ಪಕ್ಷ. ಪದೇ ಪದೇ ಸಿದ್ದರಾಮಯ್ಯ ನಾನು ಅಹಿಂದ ನಾಯಕ ಎನ್ನುತ್ತಾರೆ. ದೇಶದಲ್ಲಿ ಪ್ರಧಾನಿ ಮೋದಿಗಿಂತ ಅಹಿಂದ ನಾಯಕ ಯಾರು ಇಲ್ಲ. ಹಿಂದುಳಿದ, ಸಣ್ಣ ಸಮುದಾಯದ ನಾಯಕ ಮೋದಿ ಎಂದು ಸಾರಿದ್ದಾರೆ.
ಬೊಮ್ಮಾಯಿ ಜ್ಞಾನಿ, ಬುದ್ಧಿವಂತ: ಜನತಾ ಪರಿವಾರದಿಂದ ಬಂದ ಬೊಮ್ಮಾಯಿಯನ್ನು ಬಿಜೆಪಿ ಒಪ್ಪಿಕೊಳ್ಳುತ್ತಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ, ಸಿದ್ದರಾಮಯ್ಯ ಕಾಂಗ್ರೆಸ್ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಒಪ್ಪದೇ ಇದ್ದರೇ ಸಿಎಂ ಮಾಡುತ್ತಿದ್ರಾ? ಬೊಮ್ಮಾಯಿ ಜ್ಞಾನಿ, ಬುದ್ಧಿವಂತ ಸಮರ್ಥ ಆಡಳಿತ ನಡೆಸುತ್ತಾರೆ ಅಂತಲೇ ಅವರನ್ನು ಸಿಎಂ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಇನ್ನೂ ನಾಗ್ಪುರ ಆರ್‌ಎಸ್‌ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಲ್ಲ ಎಂಬ `ಕೈ’ ನಾಯಕರ ಆರೋಪಕ್ಕೆ, ನಾನು ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಈ ದೇಶದ ಪ್ರತಿಯೊಬ್ಬ ನಾಗರಿಕರು ಅವರ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು. ಪ್ರತಿಯೊಬ್ಬರೂ ದೇಶಭಕ್ತಿಯನ್ನು ತೋರಿಸಬೇಕು. ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಮೂರು ದಿನಗಳ ಕಾಲ ಧ್ವಜ ಹಾರಿಸಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.