CoronaLatestMain PostNational

ಪ್ರಿಯಾಂಕಾ ಗಾಂಧಿಗೆ ಕೊರೊನಾ – ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಪಾಸಿಟಿವ್

ನವದೆಹಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನಗೆ ಇಂದು ಮತ್ತೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಮನೆಯಲ್ಲೇ ಐಸೋಲೇಷನ್‍ಗೆ ಒಳಗಾಗಿದ್ದೇನೆ. ಯಾರೆಲ್ಲ ನನ್ನ ಸಂಪರ್ಕ ಮಾಡಿದ್ದೀರಿ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ. ಇದನ್ನೂ ಓದಿ: ನಿತೀಶ್ ಕುಮಾರ್ 2024ರ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ? – ಬಿಹಾರದಲ್ಲಿ ಇಂದು 2ನೇ ಇನ್ನಿಂಗ್ಸ್ ಆರಂಭ

ಕಳೆದ ತಿಂಗಳು ಪಿಯಾಂಕಾ ಗಾಂಧಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಆ ಬಳಿಕ ಗುಣಮುಖರಾಗಿದ್ದರು. ಇದೀಗ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಎರಡು ತಿಂಗಳ ಅಂತರದಲ್ಲಿ ಎರಡನೇ ಬಾರಿ ಕೊರೊನಾ ಪಾಸಿಟಿವ್ ವರದಿಯಾಗಿದೆ. ಇದನ್ನೂ ಓದಿ: ನಾವೆಲ್ಲಾ ಸಚಿವರು, ನಮಗೆ ಕಾನೂನನ್ನು ಉಲ್ಲಂಘಿಸಲು ಹಕ್ಕಿದೆ: ನಿತಿನ್ ಗಡ್ಕರಿ

ಜೂನ್‍ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ದೆಹಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

Live Tv

Leave a Reply

Your email address will not be published.

Back to top button