ಚಿಕ್ಕೋಡಿ: ಬಿಜೆಪಿ ಪಕ್ಷ ಯಾವುದೇ ಆಪರೇಷನ್ ಕಮಲ ಮಾಡುತ್ತಿಲ್ಲ. ನನಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ 30 ಜನ ಶಾಸಕರು ರಾಜೀನಾಮೆ ನೀಡಲಿದ್ದು ಸರ್ಕಾರ ಬಿದ್ದರೆ ಬಿಜೆಪಿ ಪಕ್ಷ ಅಧಿಕಾರ ರಚನೆ ಮಾಡುತ್ತೆ ಎಂದು ಹುಕ್ಕೇರಿಯ ಬಿಜೆಪಿ ಶಾಸಕ, ಮಾಜಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನಗೆ ಆಪರೇಷನ್ ಕಮಲದ ಜವಾಬ್ದಾರಿ ನೀಡಿಲ್ಲ. ಕಾಂಗ್ರೆಸ್ ಜೆಡಿಎಸ್ ಒಳಜಗಳವನ್ನ ಆಪರೇಷನ್ ಕಮಲ ಅಂತಿದ್ದಾರೆ. ಆಪರೇಷನ್ ಕಮಲ ಮಾಡುವುದಾದರೆ ಸಮ್ಮಿಶ್ರ ಸರ್ಕಾರ ರಚನೆ ಮಾಡುವ ಮೂರು ತಿಂಗಳು ಹಿಂದೆ ಮಾಡಬೇಕಿತ್ತು. ಒಳ ಜಗಳದಿಂದ ಸರ್ಕಾರ ಬಿದ್ದರೆ ಸರ್ಕಾರ ರಚನೆ ಮಾಡುತ್ತೇವೆ. ಕಾಂಗ್ರೆಸ್‍ನಿಂದ ಬರುವ ಶಾಸಕರಿಗೆ ನಾವು ಸ್ವಾಗತ ಮಾಡುತ್ತೇವೆ ಎಂದರು.
Advertisement
ಬಿಜೆಪಿ ರೆಸಾರ್ಟ್ ರಾಜಕಾರಣ ಮಾಡುತ್ತಿಲ್ಲ. ನಾಳೆ ಶಾಸಕಾಂಗ ಸಭೆ ಕರೆಯಲಾಗಿದೆ ನಾನು ಹೋಗುತ್ತೇನೆ. ಸಚಿವ ರಮೇಶ ಜಾರಕಿಹೊಳಿ, ಸಂಸದ ಪ್ರಕಾಶ ಹುಕ್ಕೇರಿ, ಶಾಸಕ ಸತೀಶ ಜಾರಕಿಹೊಳಿ ಬಂದರು ಸ್ವಾಗತ ಮಾಡುತ್ತೇವೆ. ಮುಂದಿನ 5 ವರ್ಷ ಬಿಜೆಪಿ ಸರ್ಕಾರ ರಚನೆ ಆದರೂ ನನಗೆ ಸಚಿವ ಸ್ಥಾನ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಬೇಡ ಎಂದು ರಮೇಶ ಜಾರಕಿಹೊಳಿಗೆ ಬಿಟ್ಟು ಕೊಡುವ ಅರ್ಥದಲ್ಲಿ ಪರೋಕ್ಷವಾಗಿ ಮಾತನಾಡಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv