ಬೆಂಗಳೂರು: ಈಗಂತೂ ನೆತ್ತಿ ಸುಡೋ ಬಿಸಿಲು. ಕಾರಿನಲ್ಲಿ ಹೋಗೋರೇನೂ ಏಸಿ ಹಾಕ್ಕೊಳ್ತಾರೆ. ನಡೆದುಕೊಂಡು ಹೋಗೋರು ಛತ್ರಿ ಹಿಡ್ಕೊಂಡು ಹೋಗಬಹುದು. ಆದ್ರೆ ದ್ವಿಚಕ್ರ ವಾಹನಗಳಲ್ಲಿ ಓಡಾಡೋರು ಏನ್ಮಾಡ್ಬೇಕು? ಇದಕ್ಕೂ ಒಂದು ಐಡಿಯಾ ಬಂದಿದೆ. ಬೆಂಗಳೂರಿನಲ್ಲಿ ಸ್ಪೆಷಲ್ ಬೈಕ್ ಛತ್ರಿ ಬಂದಿದೆ.
Advertisement
ಬಿಸಿಲು ಕಾದ ಕೆಂಡದಂತಿರುವಾಗ ದ್ವಿಚಕ್ರ ವಾಹನಗಳಲ್ಲಿ ಹೋಗೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಇದಕ್ಕಾಗಿ ಈ ಸ್ಪೆಷಲ್ ಕೊಡೆ ಬಂದಿದೆ. ದಾಸರಹಳ್ಳಿಯ ಬ್ರೌನಿ ಅನ್ನೋರು ಈ ಕೊಡೆಯನ್ನು ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿ ಹೊಸ ಅವಿಷ್ಕಾರ ಮಾಡಿದ್ದಾರೆ. ಸದ್ಯ ಈ ಸಮ್ಮರ್ ಸ್ಪೆಷಲ್ ಛತ್ರಿಗೆ ಫುಲ್ ಡಿಮ್ಯಾಂಡ್ ಇದೆ. ಇದನ್ನ ತೈವಾನ್‍ನಿಂದ ತರಿಸಲಾಗುತ್ತಿದ್ದು, ಎಷ್ಟೇ ವೇಗದಲ್ಲಿ ಹೋದ್ರೂ ಛತ್ರಿ ಅಲ್ಲಾಡಲ್ಲ. ಇಬ್ಬರು ಕುಳಿತುಕೊಳ್ಳಬಹುದಾದ ಜಾಗದಲ್ಲಿ ಛತ್ರಿಯ ನೆರಳು ಬೀಳುತ್ತೆ, ಜೊತೆಗೆ ಸೂರ್ಯನ ಕಿರಣವನ್ನೂ ತಡೆಯೋ ಶಕ್ತಿ ಈ ಛತ್ರಿಗಿದೆಯಂತೆ.
Advertisement
Advertisement
ಇನ್ನು ಹುಡ್ಗೀರಂತೂ ಈ ಟೂ ವೀಲರ್ ಛತ್ರಿಗೆ ಫುಲ್ ಫಿದಾ ಆಗಿದ್ದಾರೆ. ಕೇವಲ ಸ್ಕೂಟಿ, ಸ್ಕೂಟರ್‍ಗಳಿಗೆ ಮಾತ್ರವಲ್ಲ ಬೈಕ್‍ಗಳಿಗೂ ಇದನ್ನು ಆಳವಡಿಸಬಹುದಾಗಿದೆ. ಸ್ಕೂಟಿ ಛತ್ರಿಗಾದ್ರೆ ಎರಡು ಸಾವಿರ, ಬೈಕಿಗಾದ್ರೇ ಮೂರು ಸಾವಿರ ರೂಪಾಯಿ ನೀಡಬೇಕಾಗುತ್ತೆ. ಸದ್ಯ ಈ ಟೂ ವೀಲರ್ ಛತ್ರಿ ಟ್ರೆಂಡ್ ಆಗಿದೆ. ವಾಹನ ಸವಾರರಿಗೂ ಖುಷಿ ಕೊಡುತ್ತಿದೆ.
Advertisement
ಬೇಸಿಗೆಯಲ್ಲಿ ಕೂಲ್ ಆಗಿರಬೇಕು ಅಂತಾ ಅಂದುಕೊಳ್ಳೋರು ಈ ಸ್ಪೆಷಲ್ ಛತ್ರಿಯನ್ನ ದ್ವಿಚಕ್ರ ವಾಹನಕ್ಕೆ ಆಟ್ಯಾಚ್ ಮಾಡಿಕೊಂಡು ಹಾಯಾಗಿ ರೌಂಡ್ ಹೊಡೀಬಹುದು.