ಕೀವ್: ಫೆಬ್ರವರಿ 20ರಿಂದ ರಷ್ಯಾ, ಉಕ್ರೇನ್ ಮೇಲೆ ನಿರಂತರವಾಗಿ ಯುದ್ಧ ಮಾಡುತ್ತಿದೆ. ಈಗ ಮರಿಯುಪೋಲ್ ಉಕ್ರೇನ್ ಸೈನಿಕರು ರಷ್ಯಾಗೆ ಶರಣಾಗಿದೆ.
ಮರಿಯುಪೋಲ್‍ನ ಅಜೋವ್‍ಸ್ಟಾಲ್ ಸ್ಟೀಲ್‌ವರ್ಕ್ಸ್ ನಲ್ಲಿ ರಷ್ಯಾದ ಪಡೆಗಳಿಗೆ 250ಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಶರಣಾಗಿದ್ದಾರೆ. ಈ ಹಿನ್ನೆಲೆ ಶರಣಾದ ಉಕ್ರೇನ್ ಸೈನಿಕರ ವಿಶೇಷ ಕಾಳಜಿ ಮಾಡಲು ರಷ್ಯಾ ನಿರ್ಧರಿಸಿದೆ. ಇದನ್ನೂ ಓದಿ: ಹಾಸನ ಜಿಲ್ಲೆಯಲ್ಲಿ ಇಂದು 1 ರಿಂದ 10ನೇ ತರಗತಿವರೆಗೆ ರಜೆ ಘೋಷಣೆ
Advertisement
Advertisement
ಕಳೆದ 24 ಗಂಟೆಗಳಲ್ಲಿ 265 ಸೈನಿಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ. ಇದರಲ್ಲಿ 51 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ವೈದ್ಯಕೀಯ ಆರೈಕೆಯ ಅಗತ್ಯವಿರುವವರನ್ನು ನೊವೊಜೊವ್ಸ್ಕ್ ಪಟ್ಟಣದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
Advertisement
Advertisement
ಉಕ್ರೇನ್ ಸೈನಿಕರನ್ನು ಯುದ್ಧಾಪರಾಧಿಗಳು ಅಥವಾ ಯುದ್ಧ ಖೈದಿಗಳು ಎಂದು ಪರಿಗಣಿಸಲಾಗುವುದೇ ಎಂದು ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ವಕ್ತಾರರು ಉತ್ತರವನ್ನು ನೀಡಲಿಲ್ಲ. ಆದರೆ, ಅಂತರರಾಷ್ಟ್ರೀಯ ಕಾನೂನುಗಳ ಪ್ರಕಾರ ಶರಣಾದ ಸೈನಿಕರನ್ನು ನೋಡಿಕೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಇದನ್ನೂ ಓದಿ: ದೇವೇಗೌಡರ ಜನ್ಮದಿನಕ್ಕೆ ಶುಭ ಕೋರಿದ ಮೋದಿ