LatestMain PostNational

ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ ಮೋದಿ

ನವದೆಹಲಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, 89ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟ್ಟರ್‌ನಲ್ಲಿ ಶುಭಕೋರಿದ್ದಾರೆ.

ಮೋದಿ ಅವರು, ನಮ್ಮ ಮಾಜಿ ಪ್ರಧಾನಿ ಮತ್ತು ಗೌರವಾನ್ವಿತ ರಾಜಕಾರಣಿ ಹೆಚ್.ಡಿ.ದೇವೇಗೌಡರಿಗೆ ಜನ್ಮದಿನದ ಶುಭಾಶಯಗಳು. ಸರ್ವಶಕ್ತನು ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ದಯಪಾಲಿಸಲಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಟ್ರ್ಯಾಕ್ಟರ್ ಸೌಂಡ್ ಕಡಿಮೆ ಮಾಡಿ ಎಂದಿದಕ್ಕೆ ಸ್ವಾಮೀಜಿ ಮೇಲೆಯೇ ಹಲ್ಲೆ 

ಮೋದಿ ಅವರು ವಿಶ್‌ ಮಾಡಿದ ಟ್ವೀಟ್ ಅನ್ನು ದೇವೇಗೌಡರಿಗೆ ಟ್ಯಾಗ್ ಮಾಡಿದ್ದಾರೆ. ಮೋದಿ ಅವರು ಈ ಮೂಲಕ ಹಿರಿಯ ರಾಜಕಾರಣಿ ದೇವೇಗೌಡರಿಗೆ ಗೌರವ ಸಲ್ಲಿಸಿದ್ದಾರೆ. ಈ ಹಿಂದೆ ದೇವೇಗೌಡರು ಮೋದಿ ಅವರನ್ನು ಭೇಟಿ ಮಾಡಿದಾಗಲೂ ಬಹಳ ಗೌರವದಿಂದ ಅವರನ್ನು ನಡೆಸಿಕೊಂಡಿದ್ದರು. ಅವರ ಭೇಟಿ ವೇಳೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

Leave a Reply

Your email address will not be published.

Back to top button