ವಾಷಿಂಗ್ಟನ್: ರಷ್ಯಾ ದಾಳಿಗೊಳಗಾದ ಯುದ್ಧಪೀಡಿತ ಉಕ್ರೇನ್ ತೀವ್ರ ಸಂಕಷ್ಟಕ್ಕೊಳಗಾಗಿದೆ. ಉಕ್ರೇನ್ ರಕ್ಷಣೆಗೆ ಸೈನಿಕರು ಪ್ರತಿ ಕ್ಷಣ ಹೋರಾಟ ಮಾಡುತ್ತಿದ್ದಾರೆ. ಉಕ್ರೇನ್ ಸಂಕಷ್ಟಕ್ಕೆ ನೆರವಾಗಲು ಉದ್ಯಮಿಗಳು, ಸೆಲೆಬ್ರಿಟಿಗಳು, ಸಂಘ, ಸಂಸ್ಥೆಗಳು ದೇಣಿಗೆ ಸಂಗ್ರಹಕ್ಕೆ ಮುಂದಾಗಿದೆ.
Advertisement
ಬಲಾಢ್ಯ ರಷ್ಯಾ ವಿರುದ್ಧ ಕಾದಾಡುತ್ತಿರುವ ಉಕ್ರೇನ್ ಪರ ವಿಶ್ವದಾದ್ಯಂತ ಪ್ರತಿಭಟನೆಗಳು ನಡೆಯುತ್ತಿರುವಾಗಲೇ ಆ ದೇಶಕ್ಕೆ ಬಲ ತುಂಬುವ ಉದ್ದೇಶದಿಂದ ದೇಣಿಗೆ ಸಂಗ್ರಹ ಅಭಿಯಾನವೂ ನಡೆಯುತ್ತಿದೆ. ಉಕ್ರೇನ್ ಪರ ಹಲವು ಸಸ್ಥೆಗಳು ಅಭಿಯಾನವನ್ನು ಆರಂಭಿಸಿವೆ. ಬ್ಲಾಕ್‍ಚೈನ್ ವಿಶ್ಲೇಷಣಾ ಸಂಸ್ಥೆ ಎಲ್ಲಿಪ್ಟಿಕ್ ಅಂಕಿ – ಅಂಶಗಳ ಪ್ರಕಾರ , ಉಕ್ರೇನ್ ಸರ್ಕಾರೇತರ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಘಟನೆಗಳಿಗೆ 30 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕ್ರಿಪ್ಟೋಕರೆನ್ಸಿ ಹರಿದು ಬಂದಿದೆ. ಅಮೆರಿಕದ ಉದ್ಯಮಿ ಸ್ಯಾಮ್ ಬ್ಯಾಂಕ್‍ಮ್ಯಾನ್ ಫ್ರೈಡ್ ಅವರ ಕಂಪನಿ ಪ್ರತಿ ಉಕ್ರೇನ್ ಪ್ರಜೆಗೆ 1900 ರೂಪಾಯಿ ನೀಡುವುದಾಗಿ ಘೋಷಿಸಿದೆ.
Advertisement
Advertisement
ಬಹುಮಾನದ ಮೊತ್ತವನ್ನು ದೇಶಕ್ಕೆ ದೇಣಿಗೆ ಕೊಟ್ಟ ಉಕ್ರೇನ್ ಟೆನಿಸ್ ತಾರೆ: ಎಲಿನಾ ಸ್ವಿಟೋಲಿನಾ ಟೆನ್ನಿಸ್ ಅಸೋಷಿಯೇಶನ್ ಪಂದ್ಯಾವಳಿಯಿಂದ ತನಗೆ ಬರಲಿರುವ ಬಹುಮಾನ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ಮಾನವೀಯ ನೆರವು ಒದಗಿಸುವ ನಿಟ್ಟಿನಲ್ಲಿ ದೇಣಿಗೆಯಾಗಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
ವಿಶ್ವದ ನಂಬರ್ 16ನೇ ಸ್ಥಾನದಲ್ಲಿರುವ ಎಲಿನಾ, ಉಕ್ರೇನಿನಲ್ಲಿದ್ದು ದೇಶವನ್ನು ರಕ್ಷಿಸುವ ಹೋರಾಡುತ್ತಿರುವ ತನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಸಹಾಯ ಮಾಡಲು ಬಯಸುತ್ತೇನೆ. ನನ್ನ ದೇಶದಲ್ಲಿ ಕೆಲವು ಪ್ರಾಣ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ. ಮೆಕ್ಸಿಕೊ ಹಾಗೂ ಅಮೆರಿಕದಲ್ಲಿ ನಡೆಯುತ್ತಿರುವ ಪಂದ್ಯಗಳಲ್ಲಿ ನಾನು ಪಡೆಯುವ ಬಹುಮಾನ ಎಲ್ಲ ಮೊತ್ತವನ್ನು ಉಕ್ರೇನಿನ ಸೇನೆಗೆ ಹಾಗೂ ಸಂತ್ರಸ್ತರಿಗೆ ನೀಡುತ್ತೇನೆ ಎಂದಿದ್ದಾರೆ.