ಕೀವ್: 6 ದಿನದಲ್ಲಿ ರಷ್ಯದ 6 ಸಾವಿರ ಯೋಧರ ಹತ್ಯೆಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ಹೇಳಿದ್ದಾರೆ.
Advertisement
ಉಸಿರು ಇರುವವರೆಗೂ ರಷ್ಯಾಗೆ ಶರಣಾಗುವ ಮಾತೇ ಇಲ್ಲ. ಇದುವರೆಗೂ ನಾವು ರಷ್ಯಾದ 6 ಸಾವಿರ ಯೋಧಕರು ಸಾವನ್ನಪಿದ್ದಾರೆ. ಉಕ್ರೇನ್‌ನಲ್ಲಿ 14 ಮಕ್ಕಳು ಸೇರಿದಂತೆ 300ಕ್ಕೂ ಹೆಚ್ಚು ನಾಗರಿಕರು ಇದುವರೆಗೆ ಕೊಲ್ಲಲ್ಪಟ್ಟಿದ್ದಾರೆ ಎಂದು ಝೆಲೆನ್‍ಸ್ಕಿ ಹೇಳಿದ್ದಾರೆ.
Advertisement
Advertisement
ಕಠಿಣ ನಿರ್ಬಂಧ ಮತ್ತು ಜಾಗತಿಕ ಖಂಡನೆಯನ್ನು ಎದುರಿಸುತ್ತಿರುವ ರಷ್ಯಾ, ತನ್ನ ಎಲ್ಲಾ ಗುರಿಗಳನ್ನು ಸಾಧಿಸುವವರೆಗೆ ಉಕ್ರೇನ್ ಆಕ್ರಮಣವನ್ನು ಮುಂದುವರಿಸುವುದಾಗಿ ಹೇಳಿದೆ ಎಂದು ರಕ್ಷಣಾ ಸಚಿವ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?
Advertisement
ಉಕ್ರೇನ್ ಮೇಲೆ ಕಳೆದ ವಾರ ರಷ್ಯಾ ಯುದ್ಧವನ್ನು ಘೋಷಿಸಿತು. ರಷ್ಯಾ ಸೇನಾ ಪಡೆ ನಿರಂತರವಾಗಿ ದಾಳಿಗಳನ್ನು ನಡೆಸುತ್ತಿದ್ದು, ಹಂತಹಂತವಾಗಿ ಉಕ್ರೇನ್‍ನ್ನು ಅತಿಕ್ರಮಿಸುತ್ತಿದೆ. ಇದರಿಂದ ನೂರಾರು ಸಂಖ್ಯೆಯಲ್ಲಿ ಜನರು, ಸೈನಿಕರು ಸಾಯುತ್ತಿದ್ದಾರೆ. ಇದನ್ನೂ ಓದಿ: ರಷ್ಯಾ ಹಣಕಾಸು ಸಂಸ್ಥೆಗಳಿಗೆ ವೀಸಾ, ಮಾಸ್ಟರ್ ಕಾರ್ಡ್ ಬ್ಲಾಕ್ – ATMಗಳ ಮುಂದೆ ರಷ್ಯನ್ನರ ದಂಡು