ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು – ಅಮೆರಿಕ ಆಫರ್ ತಿರಸ್ಕರಿಸಿದ ಉಕ್ರೇನ್ ಅಧ್ಯಕ್ಷ

Public TV
1 Min Read
Zelensky

ಕೀವ್: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ತೀವ್ರಗೊಳ್ಳುತ್ತಿದ್ದು, ಇದೀಗ ಅಮೆರಿಕ ನೀಡಿರುವ ಆಫರ್ ಅನ್ನು ಅಧ್ಯಕ್ಷ ವೊಲೊಡಿಮಿರ್ ಝೆಲೆನ್‍ಸ್ಕಿ ತಿರಸ್ಕರಿಸಿದ್ದಾರೆ. ನನಗೆ ಸ್ಥಳಾಂತರ ಬೇಡ. ಇಲ್ಲೇ ಇದ್ದು ಹೋರಾಟ ಮಾಡುತ್ತೇನೆ ಎಂದು ವೀರಾವೇಶದ ಮಾತುಗಳನ್ನು ಆಡಿದ್ದಾರೆ.

ಕೀವ್ ತೊರೆಯುವಂತೆ ಅಮೆರಿಕ ಝೆಲೆನ್‍ಸ್ಕಿಗೆ ಸಲಹೆ ನಿಡಿತ್ತು. ಆದರೆ ದೊಡ್ಡಣ್ಣನ ಸಲಹೆಯನ್ನು ಉಕ್ರೇನ್ ಅಧ್ಯಕ್ಷ ಧಿಕ್ಕರಿಸಿದ್ದಾರೆ. ನಾನು ನನ್ನ ದೇಶದಲ್ಲಿಯೇ ಇರುತ್ತೇನೆ. ನನಗ್ಯಾವ ಜೀವ ಭಯ ಇಲ್ಲ. ಹೀಗಾಗಿ ನನಗೆ ಸ್ಥಳಾಂತರ ಬೇಡ, ಮದ್ದುಗುಂಡುಗಳು ಬೇಕು. ರಷ್ಯಾ ಸೇನೆ ವಿರುದ್ಧ ನಾನು ಕೊನೆಯವರೆಗೂ ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Volodymyr Zelensky

ಈ ಹಿಂದೆ ಟ್ವೀಟ್ ಮಾಡಿದ್ದ ಅವರು, ರಷ್ಯಾದ ಪಡೆಗಳು ರಾತ್ರಿ ಸಮಯದಲ್ಲಿ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ನಾನು ಬಹಿರಂಗವಾಗಿ ಹೇಳಬೇಕಾಗಿದೆ. ಈ ರಾತ್ರಿ, ಹಗಲಿಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ನಮ್ಮ ರಾಜ್ಯದ ಅನೇಕ ನಗರಗಳು ದಾಳಿಗೆ ಒಳಗಾಗಿವೆ ಎಂದಿದ್ದಾರೆ. ಇದನ್ನೂ ಓದಿ: ಶಾಂತಿಯುತವಾಗಿ ಬಿಕ್ಕಟ್ಟು ಪರಿಹರಿಸಿಕೊಳ್ಳಿ: ಉಕ್ರೇನ್‌, ರಷ್ಯಾಗೆ ತಾಲಿಬಾನ್‌ ಸಲಹೆ

Russia Ukraine War 5

ಕೀವ್‍ನಲ್ಲಿ ವಿಶೇಷ ಗಮನ ಹರಿಸಿದ್ದೇವೆ. ನಾವು ರಾಜಧಾನಿಯನ್ನು ಕಳೆದುಕೊಳ್ಳುವುದಿಲ್ಲ. ನಾನು ನಮ್ಮ ರಕ್ಷಕರೊಂದಿಗೆ ಎಲ್ಲಾ ಪ್ರದೇಶಗಳಿಗೂ ಹೋಗುತ್ತಿದ್ದೇನೆ. ಈ ರಾತ್ರಿ ಶತ್ರುಗಳು ಅಮಾನವೀಯ ರೀತಿಯಲ್ಲಿ ನಮ್ಮನ್ನು ಹತ್ತಿಕ್ಕಲು ಎಲ್ಲಾ ಶಕ್ತಿಗಳನ್ನು ಬಳಸುತ್ತಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ರಷ್ಯಾ ವಿರುದ್ಧದ UNSC ನಿರ್ಣಯದಿಂದ ದೂರ ಉಳಿದ ಭಾರತ – ಧನ್ಯವಾದ ತಿಳಿಸಿದ ರಷ್ಯಾ

Volodymyr Zelensky

ಈಗಾಗಲೇ ಕೀವ್ ನಗರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ಸುತ್ತವರಿದಿದ್ದು, ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಯಾಗುತ್ತಿದೆ. ಕೀವ್ ನಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ. ಇಂಟರ್ ನೆಟ್ ಸೇವೆ ಕೂಡ ಸ್ಥಗಿತಗೊಂಡಿದೆ. ಈ ಮಧ್ಯೆಯೂ ಉಕ್ರೇನ್ ಅಧ್ಯಕ್ಷ ದಿಟ್ಟತನದ ಮಾತಗಳನ್ನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *