ಲಕ್ನೋ: ರಷ್ಯಾ- ಉಕ್ರೇನ್ (Ukraine Russia) ಯುದ್ಧದಲ್ಲಿ ತನ್ನ ಇಡೀ ಕುಟುಂಬವನ್ನು ಕಳೆದುಕೊಂಡ ಉಕ್ರೇನ್ ಪ್ರಜೆಯೊಬ್ಬ ವಾರಾಣಾಸಿಯ (Varanasi) ಭೇಲುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಾರದ್ ಘಾಟ್ ಪ್ರದೇಶದ ಅತಿಥಿ ಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ಬೆಲಿಯಾಯೆವ್ (50) ಮೃತ ವ್ಯಕ್ತಿ. ಸ್ಥಳೀಯರ ಮಾಹಿತಿ ಪ್ರಕಾರ, ಉಕ್ರೇನ್ ಪ್ರಜೆ ಕೋಸ್ಟಿಯಾಟಿನ್ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಅನೇಕ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೋಸ್ಟಿಯಾಟಿನ್ ಖಿನ್ನತೆಗೆ ಒಳಗಾಗಿದ್ದರು. ಅಷ್ಟೇ ಅಲ್ಲದೇ ಅವರು ಮರಣಾನಂತರದ ಕಾಶಿಯಲ್ಲಿ (Kashi) ಮೋಕ್ಷ ಸಿಗುತ್ತದೆ ಎನ್ನುವುದರ ಬಗ್ಗೆ ಮಾತನಾಡಿದ್ದರು ಎಂದು ತಿಳಿಸಿದರು.
UP | A Ukraine man died by suicide at a guesthouse in Bhelupur, Varanasi
He has been identified as Kostiantyan Benev. Prima facie it appears to be a case of suicide as his room was locked from the inside: Santosh Kumar Singh, Additional Commissioner of Police, Varanasi pic.twitter.com/AnMFEq24yg
— ANI UP/Uttarakhand (@ANINewsUP) December 26, 2022
ಕೋಸ್ಟಿಯಾಟಿನ್ ನ. 29ರಿಂದ ನಾರದ್ ಘಾಟ್‍ನಲ್ಲಿರುವ ಮುನ್ನಾ ಗೆಸ್ಟ್‌ಹೌಸ್‍ನಲ್ಲಿ ತಂಗಿದ್ದರು. ಆದರೆ ಭಾನುವಾರ ಸಸಾರಾಮ್ (ಬಿಹಾರ)ಗೆ ಹೋಗಬೇಕಿತ್ತು. ಆದರೆ ಅವರು ಹೋಗಿರಲಿಲ್ಲ. ಇದರಿಂದ ಪ್ರಶ್ನಿಸಲು ಕೋಸ್ಟಿಯಾಟಿನ್ ಕೊಣೆಗೆ ಹೋಗಿದ್ದಾರೆ. ಆದರೆ ಒಳಗಡೆಯಿಂದ ಲಾಕ್ ಆಗಿತ್ತು. ಎಷ್ಟೇ ಪ್ರಯತ್ನಿಸಿದರೂ ಒಳಗಡೆಯಿಂದ ಪ್ರತಿಕ್ರಿಯೆ ಬಾರದ್ದನ್ನು ಗಮನಿಸಿದ ಹೊಟೆಲ್ ಸಿಬ್ಬಂದಿ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಸೀಲಿಂಗ್ ರಾಡ್‍ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆ- ಖಾಸಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಲೆ ಎಷ್ಟು?
ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಉಕ್ರೇನ್ ಪ್ರಜೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆದರೆ ಶವ ಪತ್ತೆಯಾದ ಕೋಣೆಯಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಉಕ್ರೇನ್ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಪ್ರಕಾರ, ಅವರು ತಮ್ಮ ರಷ್ಯಾದ ಗೆಳತಿಯೊಂದಿಗೆ ವಾರಣಾಸಿಯಲ್ಲಿ ತಂಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ನಿದ್ದೆಯಿಲ್ಲ, ಆರೋಗ್ಯದಲ್ಲಿ ಸಮಸ್ಯೆ ಇದೆ: ಹೆಚ್‌ಡಿಕೆ