ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಸಂಘರ್ಷ ಮುಂದುವರಿದಿದ್ದು, 23ನೇ ದಿನಕ್ಕೆ ಕಾಲಿಟ್ಟಿದೆ. ಇದೀಗ ರಷ್ಯಾದ ರಾಕೆಟ್ ದಾಳಿಗೆ ಉಕ್ರೇನಿನ ಜನಪ್ರಿಯ ನಟಿಯೊಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ನಟಿಯನ್ನು ಒಕ್ಸಾನಾ ಶ್ವೇಟ್ಸ್‍ನ್ನು(67) ಎಂದು ಗುರುತಿಸಲಾಗಿದೆ. ಕೀವ್‍ನ ರೆಸಿಡೆನ್ಶಿಯಲ್ ಕಟ್ಟಡದ ಮೇಲಾದ ರಾಕೆಟ್ ದಾಳಿಯಲ್ಲಿ ಇವರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಕ್ಸಾನಾಗೆ ಸ್ಥಳೀಯ ಸರ್ಕಾರ ಉಕ್ರೇನ್‍ನ ಅತ್ಯುನ್ನತ ಕಲಾತ್ಮಕ ಗೌರವಗಳಲ್ಲಿ ಒಂದಾದ ‘ಉಕ್ರೇನ್‍ನ ಗೌರವಾನ್ವಿತ ಕಲಾವಿದೆ’ ಎಂಬ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದನ್ನೂ ಓದಿ: ಮೊದಲ ದಿನವೇ 30 ಕೋಟಿ ಕಲೆಕ್ಷನ್ – 100 ಕೋಟಿ ಕ್ಲಬ್ ಸೇರುತ್ತಾ ಜೇಮ್ಸ್..?
ಫೆಬ್ರವರಿ 24 ರಂದು ಉಕ್ರೇನ್‍ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗ್ತಿಲ್ಲ. ಉಕ್ರೇನ್ ಸೈನಿಕರ ಸಮರ್ಥ ದಾಳಿಗಳಿಂದ ಕಂಗಟ್ಟಿರುವ ರಷ್ಯಾ ಪಡೆಗಳು ಹೆಚ್ಚುಕಡಿಮೆ ಮುಂದಕ್ಕೆ ಚಲಿಸಲಾಗದ ಚಕ್ರವ್ಯೂಹದಲ್ಲಿ ಸಿಲುಕಿವೆ. ಭೂಮಿ, ಸಮುದ್ರ, ಆಕಾಶ ಮಾರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಗೆ ಆಗ್ತಿಲ್ಲ. ಬದಲಾಗಿ ಭಾರಿ ನಷ್ಟ ವಾಗುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಚೆರ್ನಿಹೀವ್‍ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಉಕ್ರೇನಿಯನ್ನರು ಕೆನಡಾದಲ್ಲಿ 3 ವರ್ಷ ಉಳಿಯಬಹುದು
ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್ರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ.