ಕೀವ್: ಈಗಾಗಲೇ ಉಕ್ರೇನ್‍ನ ಪ್ರಮುಖ 4 ನಗರಗಳಲ್ಲಿ ಕದನ ವಿರಾಮ ಘೋಷಣೆಯಾಗಿದ್ದು, ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ದೇಶಕ್ಕೆ ಮರಳಲು ರಷ್ಯಾದ 2 ಮಾರ್ಗಗಳನ್ನು ತೆರೆದಿದೆ.
ಸುಮಿ- ಸುದ್ಝಾ- ಬಲ್ಗ್ರೋಡಾ ಒಂದು ಮಾರ್ಗವಾದರೆ ಮತ್ತೊಂದು ಮಾರ್ಗ ಸುಮಿ-ಗೊಲುಬೊವ್ಕಾ-ರೊಮ್ನಿ-ಲೋಖ್ವಿಟ್ಸಾ-ಲುಬ್ನಿ-ಪೋಲ್ಟವಾ (ಮಧ್ಯ ಉಕ್ರೇನ್)ದ ಮೂಲಕ ತೆರಳಲು ಅವಕಾಶ ನೀಡಿದೆ. ಇದರಿಂದಾಗಿ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ರಿಲಿಫ್ ಸಿಕ್ಕಿದೆ.
Advertisement
Breaking: In positive news for 500+ Indian students, Russia announces opening of 2 routes for Sumy
1) Sumy-Sudzha-Belgorod(in Russia)
2) Sumy-Golubovka-Romny-Lokhvitsa-Lubny-Poltava (central Ukraine)
PS: information has been communicated to UN, the OSCE, ICRC https://t.co/BSlqA8INgV
— Sidhant Sibal (@sidhant) March 7, 2022
Advertisement
ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸುಮಿ ವಿವಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರು ಕಳೆದ 12 ದಿನಗಳಿಂದ ಮೂಲಭೂತ ಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ತನ್ನ ದೇಶದ ಮೂಲಕ ಹೊಗಲು ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ – ಬಂಗಾರದ ಬೆಲೆ ಭಾರೀ ಏರಿಕೆ
Advertisement
Advertisement
ಸುಮಿ ಪೂರ್ವ ಭಾಗದಲ್ಲಿದೆ. ರೊಮೆನಿಯಾ ಪಶ್ಚಿಮ ಭಾಗದಲ್ಲಿದೆ. ಅಲ್ಲಿ ತೆರಳಲು ಸುಮಿಯಲ್ಲಿರುವ ವಿದ್ಯಾರ್ಥಿಗಳು ಸುಮಾರು 1500 ಕಿಮೀ ಅಧಿಕ ಕ್ರಮಿಸಬೇಕಾಗುತ್ತದೆ. ಯುದ್ಧದ ಹಿನ್ನೆಲೆಯಲ್ಲಿ ಅತ್ಯಲ್ಪ ಸಮಯದಲ್ಲಿ ಅಲ್ಲಿಗೆ ತೆರಳುವುದು ಅಸಾಧ್ಯವಾಗಿದೆ. ಇದರಿಂದಾಗಿ ರೋಮೆನಿಯಾದ ಬದಲು ಸುಮಾರು 50-60 ಕಿಮೀ ದೂರದಲ್ಲಿರುವ ರಷ್ಯಾದಿಂದ ಚಲಿಸಲು ಅವಕಾಶ ಮಾಡಿಕೊಟ್ಟಿದೆ. ಇದನ್ನೂ ಓದಿ: ಉಕ್ರೇನ್‍ನ 4 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ
ರಷ್ಯಾ ಭಾರತೀಯ ಕಾಲಮಾನ ಮಧ್ಯಾಹ್ನ 12:30ರಿಂದ ಕದನ ವಿರಾಮ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ರಷ್ಯಾದ ಮೂಲಕ ಸ್ವದೇಶಕ್ಕೆ ಬರುವ ಸಾಧ್ಯತೆಯಿದೆ.