ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ಯುದ್ಧದ ಪರಿಣಾಮ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ.
ಇಂದಿನ ಮಾರುಕಟ್ಟೆಯ ಮಾಹಿತಿ ಪ್ರಕಾರ ಹತ್ತು ಗ್ರಾಂ ಚಿನ್ನಕ್ಕೆ ಒಂದೇ ದಿನದಲ್ಲಿ ಒಂದು ಸಾವಿರ ರೂಪಾಯಿ ಏರಿಕೆಯಾಗಿದೆ. ಅಲ್ಲದೇ ಬೆಳ್ಳಿ ಕೂಡ ಕೆಜಿಗೆ 1,800 ರೂಪಾಯಿ ಏರಿಕೆ ಕಂಡಿದೆ. ಇದನ್ನೂ ಓದಿ: NSE ವಂಚನೆ ಪ್ರಕರಣ – ಮಾಜಿ CEO ಚಿತ್ರಾ ರಾಮಕೃಷ್ಣ ಬಂಧನ
Advertisement
Advertisement
ಮುಂದಿನ ದಿನದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಇನ್ನಷ್ಟು ಏರಿಕೆಯಾಗಲಿದೆ. ಒಂದು ಗ್ರಾಂ ಚಿನ್ನ ಆರು ಸಾವಿರ ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದ್ದು, ಹತ್ತು ಗ್ರಾಂಗೆ ಆರವತ್ತು ಸಾವಿರ ಆಗುವ ಸಾಧ್ಯತೆ ಇದೆ. ಸದ್ಯ ಬೆಳ್ಳಿ ಕೂಡ ಕೆಜಿಗೆ 75 ಸಾವಿರ ರೂಪಾಯಿ ಇದ್ದು, ಮುಂದೆ 90 ಸಾವಿರ ರೂಪಾಯಿಗೆ ಏರಿಕೆ ಕಾಣುವ ಸಾಧ್ಯತೆ ಇದೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಯುದ್ಧ – 14 ವರ್ಷದ ಬಳಿಕ ಕಚ್ಚಾತೈಲ ಬೆಲೆ ಭಾರೀ ಏರಿಕೆ
Advertisement
Advertisement
ನಿನ್ನೆ 22 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 4,840 ರೂಪಾಯಿಯಷ್ಟಿತ್ತು, ಇಂದು 22 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 4,950 ರೂಪಾಯಿ ಆಗಿದೆ ಮತ್ತು 24 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ ನಿನ್ನೆ 5,300 ರೂಪಾಯಿಯಷ್ಟಿತ್ತು. ಆದರೆ ಇಂದು 24 ಕ್ಯಾರೆಟ್‍ನ 1 ಗ್ರಾಂ ಚಿನ್ನದ ಬೆಲೆ 5,400 ರೂಪಾಯಿ ಆಗಿದೆ. ಇದಲ್ಲದೇ ಒಂದು ಕೆಜಿ ಬೆಳ್ಳಿಗೆ ನಿನ್ನೆಗಿಂತ 1,800 ರೂಪಾಯಿ ಏರಿಕೆಯಾಗಿದ್ದು, ಇಂದು ಒಟ್ಟಾರೆ ಬೆಳ್ಳಿ ಬೆಲೆ 75,200 ರೂಪಾಯಿ ಆಗಿದೆ.