ರಾಯಚೂರು: ಉಕ್ರೇನ್ ರಷ್ಯಾ ಯುದ್ಧ ಹಿನ್ನೆಲೆ ಉಕ್ರೇನ್‍ನಲ್ಲಿ ಸಿಲುಕಿರುವ ಜಿಲ್ಲೆಯ ಒಟ್ಟು 14 ವಿದ್ಯಾರ್ಥಿಗಳು ಕಷ್ಟದ ಸಮಯ ಎದುರಿಸುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸುಗೂರಿನ ವಿದ್ಯಾರ್ಥಿ ಪ್ರಜ್ವಲ್ ಕುಮಾರ್ ಉಕ್ರೇನ್ ಬಂಕರ್‍ನಲ್ಲಿನ ಕರಾಳ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement
ಉಕ್ರೇನ್‍ನ ಕಾರ್ಕೀವ್‍ನಲ್ಲಿಯೇ ರಷ್ಯನ್ ಸೇನೆ ಬಂದಿಳಿದಿದೆ. ಕಫ್ರ್ಯೂ ಜಾರಿಯಾಗಿದ್ದು ನಾವು ಬಂಕರ್ ಒಳಗಡೆಯೇ ಕಾಲ ಕಳೆಯುತ್ತಿದ್ದೇವೆ. ಊಟ ನೀರಿಗೆ ಸಮಸ್ಯೆಯಾಗಿದೆ. ಹೊರಗಡೆ ಹೋದರೆ ಅಪಾಯವಿದೆ. ಒಳಗಡೆಯೇ ಇದ್ದರೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಏನು ಮಾಡಬೇಕು ಅನ್ನೋದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ- ಕಲಬೆರಕೆ ಸೇಂದಿ ಜಪ್ತಿ
Advertisement
Advertisement
ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದು, ನಿರಂತರವಾಗಿ ವಿವರ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಅರ್ಜಿಗಳನ್ನ ತುಂಬಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗುತ್ತಿಲ್ಲ. ಗಡಿ ಪ್ರದೇಶದಿಂದ ಸುಮಾರು 1,400 ಕಿ.ಮೀ ದೂರದಲ್ಲಿ ನಾವಿದ್ದೇವೆ. ಇಲ್ಲಿ ತುಂಬಾ ಭಯವಾಗುತ್ತಿದೆ ಎಂದು ಪ್ರಜ್ವಲ್ ಕುಮಾರ್ ವಿಡಿಯೋ ಕಾಲ್ ಮೂಲಕ ಪೋಷಕರಿಗೆ ತಮ್ಮ ಕರಾಳ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!