ಕೀವ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸುತ್ತಿದ್ದರೆ ಇತ್ತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪತ್ನಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Advertisement
ಉಕ್ರೇನ್ ವಿರುದ್ಧ ರಷ್ಯಾ ಸೈನಿಕರು ಕಳೆದ ಫೆಬ್ರವರಿ ತಿಂಗಳಿಂದ ಯುದ್ಧ ಮಾಡುತ್ತಿದ್ದು, ಈಗಾಗಲೇ ಎರಡೂ ದೇಶಗಳ ಸಾವಿರಾರೂ ಸೈನಿಕರು ಮೃತಪಟ್ಟಿದ್ದಾರೆ. ಉಕ್ರೇನ್‍ನ ಕೀವ್ ಸೇರಿದಂತೆ ಬಹುತೇಕ ಪ್ರದೇಶಗಳಿಗೆ ರಷ್ಯಾ ಸೈನ್ಯ ದಾಳಿ ನಡೆಸಿ ಆಸ್ತಿ-ಪಾಸ್ತಿ ಹಾನಿಗೊಳಿಸಿದೆ. ಈ ನಡುವೆ ಇದೀಗ ಝೆಲೆನ್ಸ್ಕಿ ದಂಪತಿ ಸ್ಥಳೀಯ ಪತ್ರಿಕೆಯ ಮುಖಪುಟದ ವಿನ್ಯಾಸಕ್ಕಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಆರ್ಥಿಕ ಹಿಂಜರಿತ? – ಉತ್ತರ ಕೊಟ್ಟ ಬೈಡನ್
Advertisement
Advertisement
ಝೆಲೆನ್ಸ್ಕಿ ದಂಪತಿ ಯುದ್ಧದ ನಡುವೆ ಯುದ್ಧೋಪಕರಣಗಳ ಬಳಿ ಮತ್ತು ಸೈನಿಕರ ನಡುವೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಫೋಟೋಶೂಟ್ ಅನ್ನು ಖ್ಯಾತ ಛಾಯಾಗ್ರಾಹಕ ಅನ್ನಿ ಲೀಬೊವಿಟ್ಜ್ ಮಾಡಿದ್ದಾರೆ. ಫೋಟೋಶೂಟ್‍ನಲ್ಲಿ ಝೆಲೆನ್ಸ್ಕಿ ಕಟ್ಟಡದ ಮೆಟ್ಟಿಲುಗಳ ಮೇಲೆ ನಿಂತು ವೀರನಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮಿಲಿಟರಿ ಬಂಕರ್‌ಗಳಲ್ಲಿ ಬಳಸಲಾದ ಮರಳಿನ ಚೀಲಗಳನ್ನು ಹೊತ್ತೊಯ್ದಂತೆ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ ಪಾರ್ಥ ಚಟರ್ಜಿ ಆಪ್ತೆ ಮನೆ ಮೇಲೆ ಇಡಿ ದಾಳಿ – 50 ಕೋಟಿ ರೂ., 5 ಕೆ.ಜಿ ಚಿನ್ನ ಪತ್ತೆ
Advertisement
Massive amount of ukrainian soldiers dying every day, Zelensky : lets have a vogue shooting pic.twitter.com/BrNPYKZYR6
— Levi (@Levi_godman) July 26, 2022
ಇನ್ನೊಂದೆಡೆ ಬ್ರಿಟನ್ ಉಕ್ರೇನ್‍ಗೆ ಭಾರೀ ಪ್ರಮಾಣದ ಮಿಲಿಟರಿ ನೆರವು ನೀಡಿ ನಾಗರಿಕರಿಗೆ ಆಶ್ರಯವನ್ನೂ ನೀಡಿತ್ತು. ಇದರಿಂದ ಉಕ್ರೇನ್‍ಗೆ ಸಹಾಯವಾಗಿತ್ತು. ಬ್ರಿಟನ್ ಇದುವರೆಗೆ ಸುಮಾರು 86,000 ಉಕ್ರೇನಿಯನ್ನರಿಗೆ ವೀಸಾಗಳನ್ನು ಒದಗಿಸಿದ್ದು, ಅದರಲ್ಲಿ ಸುಮಾರು 27,000 ಜನರು ಬ್ರಿಟನ್‍ಗೆ ತಲುಪಿದ್ದಾರೆ. ಯುದ್ಧಪೀಡಿತ ಉಕ್ರೇನ್‍ಗೆ ಬ್ರಿಟನ್ 1.3 ಶತಕೋಟಿ ಪೌಂಡ್ (12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ ನೀಡಿತ್ತು. ಅದರಂತೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ. ಆದರೆ ಝೆಲೆನ್ಸ್ಕಿ ಮಾತ್ರ ಯುದ್ಧದ ನಡುವೆ ಈ ರೀತಿ ಫೋಟೋ ಶೂಟ್‍ನಲ್ಲಿ ಕಾಣಿಸಿಕೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್‌ಗಳ ಬಗ್ಗೆ ಕಾಮೆಂಟ್ ಹರಿದಾಡುತ್ತಿದೆ.