ಬೀದರ್: ಉಕ್ರೇನ್‍ನ ಮೆಟ್ರೋದಲ್ಲಿ ಸಿಲುಕಿಕೊಂಡಿರುವ ಬೀದರ್ ಮೂಲದ ವೈದ್ಯಕೀಯ ವಿದ್ಯಾರ್ಥಿ ಅಮಿತ್ ಸೆಲ್ಫಿ ವೀಡಿಯೋ ಮಾಡಿ ಉಕ್ರೇನ್ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋ ಮಾಡಿ ಮೆಟ್ರೋದಲ್ಲಿ ಸೇಫಾಗಿರುವ ಕನ್ನಡಗರನ್ನು ತೋರಿಸಿದ್ದಾರೆ. ನಾವೆಲ್ಲ ಮೆಟ್ರೋದಲ್ಲಿ ಸೇಫಾಗಿ ಇದ್ದು ಪೋಷಕರು, ಸ್ನೇಹಿತರು, ಸಂಬಂಧಿಕರು ಹಾಗೂ ವಿದ್ಯಾರ್ಥಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ದೇಶದಲ್ಲಿ ಸಿಲುಕಿದ ಹಾವೇರಿಯ 9 ವೈದ್ಯಕೀಯ ವಿದ್ಯಾರ್ಥಿಗಳು – ಪೋಷಕರಲ್ಲಿ ಆತಂಕ
Advertisement
Advertisement
ಎಂಬ್ಯೇಸಿ ಮತ್ತು ಉಕ್ರೇನ್ ಸರ್ಕಾರ ನಮ್ಮ ಜೊತೆಗೆ ಇದೆ. ನಿಮ್ಮ ಮೆಸೇಜಿಗೆ ನಾನು ರಿಪ್ಲೇ ಮಾಡುವುದಕ್ಕೆ ಆಗುತ್ತಿಲ್ಲ. ಏಕೆಂದರೆ ಇಂಟರ್ನೆಟ್ ಹಾಗೂ ಬ್ಯಾಟರಿ ಚಾರ್ಜ್ ಇಲ್ಲ. ಜೊತೆಗೆ ಹತ್ತಿರದ ಮೆಟ್ರೋ ಸ್ಟೇಷನ್‍ಗೆ ಹೋಗಿ ಸೇಫಾಗಿರಿ ಎಂದು ಭಾರತ ಸರ್ಕಾರ ಹೇಳಿದೆ ಎಂದು ಬೀದರ್‌ನ ಮಂಗಲಪೇಟೆ ನಿವಾಸಿ ಅಮಿತ್ ಚಂದ್ರಕಾಂತ್ ಸಿರೆಂಜ್ ಸೆಲ್ಫಿ ವೀಡಿಯೋದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: Russia Ukraine War – ಯಾವ ರಾಷ್ಟ್ರದ ಬೆಂಬಲ ಯಾರಿಗೆ?