ರಷ್ಯಾ ಮುತ್ತಿಗೆ – ಮರಿಯುಪೋಲ್‌ನಿಂದ ನೂರಾರು ಜನರ ಸ್ಥಳಾಂತರ

Public TV
1 Min Read
UKRAINE MARIUPOL 1

ಕೀವ್: ಉಕ್ರೇನ್ ಪೂರ್ವಭಾಗದಲ್ಲಿರುವ ಮರಿಯುಪೋಲ್‌ಗೆ ರಷ್ಯಾ ಪಡೆ ಮುತ್ತಿಗೆ ಹಾಕಿರುವ ಹಿನ್ನೆಲೆ ಅಲ್ಲಿನ ಉಕ್ಕಿನ ಸ್ಥಾವರದಿಂದ ನೂರಾರು ನಾಗರಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಫೆಬ್ರವರಿ 24ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ಪ್ರಾರಂಭಿಸಿದಾಗಿನಿಂದ ನಗರದ ಅಜೋವ್‌ಸ್ಟಾಲ್ ಸ್ಥಾವರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಿಶ್ವಸಂಸ್ಥೆ ತಿಳಿಸಿತ್ತು. ಇದನ್ನೂ ಓದಿ: ಜಹಾಂಗೀರ್‌ಪುರಿ ಹಿಂಸಾಚಾರ – ಆರೋಪಿಗಳನ್ನು ಮುಗ್ದರೆಂದ ಜಮಿಯತ್ ನಿಯೋಗ

Volodymyr Zelensky

ಕೀವ್ ಆಡಳಿತ ನಿಯಂತ್ರಿಸುತ್ತಿರುವ ಪ್ರದೇಶಗಳಿಗೆ ತೆರಳಲು ಬಯಸುವವರನ್ನು ವಿಶ್ವಸಂಸ್ಥೆ ಹಾಗೂ ಇಂಟರ್‌ನ್ಯಾಷನಲ್ ಕಮಿಟಿ ಆಫ್ ರೆಡ್‌ಕ್ರಾಸ್(ಐಸಿಆರ್‌ಸಿ) ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಗುವುದು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. 80 ಜನರನ್ನು ಸ್ಥಳಾಂತರಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಮೋದಿ ಮುಟ್ಟಿದ್ರೆ, ಗುಜರಾತ್ ಹೋಗುತ್ತೆ, ಹಿಂದುತ್ವಕ್ಕೆ ಹಾನಿಯಾಗುತ್ತೆ – ಅಡ್ವಾಣಿಗೆ ಬಾಳ್ ಠಾಕ್ರೆ ನೀಡಿದ್ರು ಸಲಹೆ

Ukraine Mariupol

ರಷ್ಯಾ ಆಕ್ರಮಣದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ. ರಷ್ಯಾ ಮುತ್ತಿಗೆ ಹಾಕಿರುವ ಮರಿಯುಪೋಲ್‌ನಲ್ಲಿನ ಪರಿಸ್ಥಿತಿ ಜಗತ್ತನ್ನೇ ಗಾಬರಿಗೊಳಿಸಿದೆ. ಈಗಾಗಲೇ ರಷ್ಯಾ ಮರಿಯುಪೋಲ್‌ನಲ್ಲಿರುವ ಉಕ್ಕಿನ ಸ್ಥಾವರದ ಮೇಲೆ ಶೆಲ್ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

Share This Article