ಬೀದರ್: ಉಕ್ರೇನ್‍ನಲ್ಲಿ ಸಿಲುಕಿರುವ ಗಡಿ ಜಿಲ್ಲೆ ಬೀದರ್‌ನ 6 ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನ್ನ, ನೀರು ಹಾಗೂ ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ಪರದಾಡುತ್ತಿದ್ದಾರೆ.
Advertisement
ಸತತವಾಗಿ ಖಾರ್ಕಿವ್ ನಗರದಲ್ಲಿ ತೀವ್ರವಾದ ಯುದ್ಧ ನಡೆಯುತ್ತಿರುವುದರಿಂದ ಮೊಬೈಲ್ ಕೂಡಾ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಮೊಬೈಲ್ ಚಾರ್ಜಿಂಗ್ ಇಲ್ಲದ ಕಾರಣ ಕುಟುಂಬಸ್ಥರ ಜೊತೆ ಮಾತನಾಡಲಾಗದೆ ಕ್ಷಣ ಕ್ಷಣಕ್ಕೂ ಪೋಷಕರು ಹಾಗೂ ವಿದ್ಯಾರ್ಥಿಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ: ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ
Advertisement
Advertisement
ಉಕ್ರೇನ್ ಖಾರ್ಕಿವ್‍ನಲ್ಲಿ ಸುತ್ತಲೂ ಬಾಂಬ್‍ಗಳು ಸ್ಫೋಟವಾಗುತ್ತಿದ್ದು, ಫೈರಿಂಗ್ ಹಾಗೂ ಯುದ್ಧದ ಟ್ಯಾಂಕ್‍ಗಳು ಓಡಾಡುತ್ತಿರುವ ಖಾರ್ಕಿವ್‍ನ ಸದ್ಯದ ಪರಿಸ್ಥಿತಿ ಬಗ್ಗೆಗಿನ ವೀಡಿಯೋಗಳನ್ನು ಅಮಿತ್ ಪಬ್ಲಿಕ್ ಟಿವಿಗೆ ಕಳುಹಿಸಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
Advertisement
ಸದ್ಯ ಯುದ್ಧ ನಡೆಯುತ್ತಿರುವ ಖಾರ್ಕಿವ್‍ನಲ್ಲೇ ಬೀದರ್ ಮೂಲದ ಅಮಿತ್, ವೈಷ್ಣವಿ, ಶಶಾಂಕ್, ವಿವೇಕ್, ಮನೋಜ್, ಪ್ರಜ್ವಲ್ ಉಕ್ರೇನ್‍ನಲ್ಲಿಯೇ ಸಿಲುಕಿದ್ದು, ಅವರನ್ನು ಏರಲಿಫ್ಟ್ ಮಾಡಲು ಕಷ್ಟವಾಗುತ್ತಿದೆ.