ಮಾಸ್ಕೋ/ಕೀವ್: ಕಳೆದ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ (Russia-Ukraine Wa) ನಡೆಯುತ್ತಲೇ ಇದೆ. ಎರಡೂ ರಾಷ್ಟ್ರಗಳು ದಾಳಿ-ಪ್ರತಿದಾಳಿ ನಡೆಸುತ್ತಲೇ ಇವೆ. ಈ ರಾಷ್ಟ್ರಗಳ ಯುದ್ಧ ಸದ್ಯಕ್ಕೆ ಮುಗಿಯುವಂತೆ ಕಾಣ್ತಿಲ್ಲ.
The dome of the Kremlin was set on fire to celebrate Russia’s Defeat Day@KremlinRussia_E@mod_russia#Moscow #Russia#Kyiv #Ukraine ????????#Kherson #Bakhmut pic.twitter.com/QORymzCZ34
— RakanSlmaan (@RakanSlmaan) May 3, 2023
Advertisement
ಉಕ್ರೇನ್ ಸಹ ರಷ್ಯಾಗೆ ತಿರುಗೇಟು ನೀಡಲು ಹಲವು ಬಾರಿ ಪ್ರಯತ್ನಿಸಿದೆ. ಈ ಬಾರಿ ರಷ್ಯಾ ಅಧ್ಯಕ್ಷ ಪುಟಿನ್ ಹತ್ಯೆಗೆ ಯತ್ನಿಸಿದ್ದು, ಪುಟಿನ್ ನಿವಾಸದ ಮೇಲೆ ಎರಡು ಡ್ರೋನ್ ದಾಳಿ ಮೂಲಕ ಹತ್ಯೆಗೆ ಯತ್ನಿಸಿದೆ. ಆದ್ರೆ ಭದ್ರತಾಪಡೆಯ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದ ಪುಟಿನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭದ್ರತಾಪಡೆಗಳು ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದ್ದು, ಈ ದಾಳಿ ಹಿಂದೆ ಉಕ್ರೇನ್ ಕೈವಾಡವಿದೆ ಎಂದು ದೂರಿದೆ. ಇದನ್ನೂ ಓದಿ: Russia-Ukraine War: ಯುದ್ಧ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿ – ಪುಟಿನ್‍ಗೆ ಮೋದಿ ಮನವಿ
Advertisement
Advertisement
ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ನಿವಾಸದ ಮೇಲೆ ಎರಡು ಶಸ್ತ್ರಾಸ್ತ್ರ ತುಂಬಿದ ಡ್ರೋನ್‌ಗಳಿಂದ ದಾಳಿ ನಡೆದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಪಡೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ಪುಟಿನ್ ಸುರಕ್ಷಿತವಾಗಿದ್ದಾರೆ. ಯಾವುದೇ ಅಪಾಯವಿಲ್ಲ. ಕ್ರೆಮ್ಲಿನ್ ಕಟ್ಟಡಕ್ಕೂ ಯಾವುದೇ ಹಾನಿಯಾಗಿಲ್ಲ. ಉಕ್ರೇನ್‌ನಿಂದ ಈ ದಾಳಿ ನಡೆದಿದೆ ಎಂದು ರಷ್ಯಾ ಭದ್ರತಾ ಪಡೆ ಹೇಳಿದೆ. ಇದನ್ನೂ ಓದಿ: Russia-Ukraine War – ಏನಿದು ರಷ್ಯಾ ಟ್ಯಾಂಕರ್‌ಗಳ ಮೇಲೆ Z ಮಾರ್ಕ್?
Advertisement
ಮೇ 9 ರಂದು ರಷ್ಯಾ ವಿಕ್ಟರಿ ಡೇ ಆಚರಣೆಗೆ ಮಾಸ್ಕೋ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಈ ದಾಳಿ ನಡೆದಿದೆ. ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ವಿಕ್ಟರಿ ಡೇ ಆಚರಣೆಗೆ ಬ್ರೇಕ್ ಹಾಕಲು ಈ ದಾಳಿ ನಡೆದಿದೆ. ಖಂಡಿತವಾಗಿಯೂ ಇದಕ್ಕೆ ಪ್ರತಿದಾಳಿ ನಡೆಯಲಿದೆ ಎಂದು ರಷ್ಯಾ ಎಚ್ಚರಿಸಿದೆ. ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಷ್ಯಾ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 5 ಮಕ್ಕಳು ಸೇರಿ 26 ಮಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿದಾಳಿಯಾಗಿ ಉಕ್ರೇನ್ ಸಾಳಿ ನಡೆಸಿದೆ ಎಂಬ ಆರೋಪಗಳೂ ಕೇಳಿಬಂದಿವೆ.