ಉಕ್ರೇನ್‌ಗೆ ಬ್ರಿಟನ್‌ನಿಂದ ಮತ್ತೆ 12 ಸಾವಿರ ಕೋಟಿ ಮಿಲಿಟರಿ ನೆರವು

Public TV
1 Min Read

ಲಂಡನ್: ಯುದ್ಧಪೀಡಿತ ಉಕ್ರೇನ್‌ಗೆ ಬ್ರಿಟನ್ ಹೊಸದಾಗಿ 1.3 ಶತಕೋಟಿ ಪೌಂಡ್(12 ಸಾವಿರ ಕೋಟಿ ರೂ.) ಮಿಲಿಟರಿ ಸಹಾಯ ನೀಡುವುದಾಗಿ ಬ್ರಿಟನ್ ಭರವಸೆ ನೀಡಿದೆ. ಭಾನುವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಗ್ರೂಪ್ ಆಫ್ ಸೆವೆನ್ ಸಂಪರ್ಕಕ್ಕೆ ಮುಂದಾಗಿರುವುದಾಗಿ ವರದಿಗಳು ತಿಳಿಸಿವೆ.

ಫೆಬ್ರವರಿ 24 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ಆಕ್ರಮಣವನ್ನು ಪ್ರಾರಂಭಿಸಿದಾಗಿನಿಂದ ಉಕ್ರೇನ್ ಬೆಂಬಲಕ್ಕೆ ನಿಂತವರಲ್ಲಿ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ಒಬ್ಬರು. ಅಂದಿನಿಂದ ಜಾನ್ಸನ್ ಉಕ್ರೇನ್‌ಗೆ ಕ್ಷಿಪಣಿ, ವಾಯು ರಕ್ಷಣಾ ವ್ಯವಸ್ಥೆ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಕಳುಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಮುಖಂಡ ತಜೀಂದರ್ ಪಾಲ್ ಸಿಂಗ್ ಬಗ್ಗಾಗೆ ಸದ್ಯಕ್ಕಿಲ್ಲ ಬಂಧನ

Boris Johnson

ಬ್ರಿಟನ್ ಉಕ್ರೇನ್‌ಗೆ ಕಳೆದ ಬಾರಿ ನೀಡಿದ ಸಹಾಯಕ್ಕಿಂತಲೂ ಈ ಬಾರಿ ದ್ವಿಗುಣ ಪ್ರಮಾಣದಲ್ಲಿ ನೀಡಿದೆ. ಇದು ಇರಾಕ್ ಹಾಗೂ ಅಫ್ಘಾನಿಸ್ತಾನಗಳಲ್ಲಿ ನಡೆದ ಯುದ್ಧದ ವೆಚ್ಚಕ್ಕಿಂತಲೂ ಅತ್ಯಧಿಕ ದರವಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಆದರೆ ಬ್ರಿಟನ್ ಸರಿಯಾದ ಲೆಕ್ಕಾಚಾರದ ವಿವರಗಳನ್ನು ನೀಡಿಲ್ಲ.

ಕಳೆದ ವಾರ ಜಾನ್ಸನ್ ಉಕ್ರೇನ್ ಸಂಸತ್ತಿನಲ್ಲಿ ಭಾಷಣ ಮಾಡಿ, ಉಕ್ರೇನ್ ಮೇಲಿನ ರಷ್ಯಾದ ದಾಳಿ ವಿವರಿಸಲು ಅಸಾಧ್ಯವಾದ ವಿನಾಶವನ್ನೇ ಮಾಡುತ್ತಿದೆ. ಇದು ಯುರೋಪಿನಾದ್ಯಂತ ಶಾಂತಿ ಹಾಗೂ ಭದ್ರತೆಗೆ ಬೆದರಿಕೆಯೂ ಆಗಿದೆ ಎಂದು ಹೇಳಿದರು. ಈ ಮೂಲಕ ಜಾನ್ಸನ್ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭವಾದ ಬಳಿಕ ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ ಮೊದಲ ಪಾಶ್ಚಿಮಾತ್ಯ ನಾಯಕರಾದರು. ಇದನ್ನೂ ಓದಿ: ಮಸೀದಿಗಳ ಮುಂದೆ ಕ್ಯಾಮೆರಾ ಅಳವಡಿಸುವಂತೆ ಓವೈಸಿ ಕರೆ

Ukraine 1

ಬ್ರಿಟನ್ ಉಕ್ರೇನ್‌ಗೆ ಭಾರೀ ಪ್ರಮಾಣದ ಮಿಲಿಟರಿ ನೆರವು ನೀಡಿರುವುದರೊಂದಿಗೆ ನಾಗರಿಕರಿಗೆ ಆಶ್ರಯವನ್ನೂ ನೀಡಿದೆ. ಇದುವರೆಗೆ ಸುಮಾರು 86,000 ಉಕ್ರೇನಿಯನ್ನರಿಗೆ ವೀಸಾಗಳನ್ನು ಒದಗಿಸಿದ್ದು, ಅದರಲ್ಲಿ ಸುಮಾರು 27,000 ಜನರು ಬ್ರಿಟನ್‌ಗೆ ತಲುಪಿದ್ದಾರೆ ಎಂದು ಬ್ರಿಟಿಷ್ ಸರ್ಕಾರ ಶನಿವಾರ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *