‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ಚೈತ್ರಾ ಕುಂದಾಪುರ (Chaitra Kundapura) ಮೇ 9ರಂದು ಹಸೆಮಣೆ ಏರಿದ್ದಾರೆ. ಈ ಹಿನ್ನೆಲೆ ನವಜೋಡಿಗೆ ಶುಭಹಾರೈಸಲು ಚೈತ್ರಾ ಮನೆಗೆ ಉಗ್ರಂ ಮಂಜು ಭೇಟಿ ನೀಡಿ ವಿಶೇಷ ಉಡುಗೊರೆ ನೀಡಿದ್ದಾರೆ. ಇದನ್ನೂ ಓದಿ:ಭಾರತ-ಪಾಕ್ ಕದನ ವಿರಾಮಕ್ಕೆ ಸಲ್ಮಾನ್ ಖಾನ್ ಖುಷಿ; ಟೀಕೆ ಬೆನ್ನಲ್ಲೇ ಪೋಸ್ಟ್ ಡಿಲೀಟ್
ಮೇ 9ರಂದು ನಡೆದ ಚೈತ್ರಾ ಮದುವೆಗೆ ಕಾರಣಾಂತರಗಳಿಂದ ಮಂಜು ಬರಲಾಗಿರಲಿಲ್ಲ. ಹೀಗಾಗಿ ನಿನ್ನೆ (ಮೇ 10) ಚೈತ್ರಾ ನಿವಾಸಕ್ಕೆ ಮಂಜು ಭೇಟಿ ನೀಡಿ ನವಜೋಡಿಗೆ ಶುಭಹಾರೈಸಿದ್ದಾರೆ. ಅದಷ್ಟೇ ಅಲ್ಲ, ಈ ಜೋಡಿಗೆ ವಿಶೇಷವಾದ ಗೋವಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದನ್ನೂ ಓದಿ:‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ
ದೊಡ್ಮನೆಯಲ್ಲಿ ಸದಾ ಮಂಜು ಮತ್ತು ಚೈತ್ರಾ ಕಿತ್ತಾಡುತ್ತಿದ್ದರು. ಈಗ ಮುನಿಸೆಲ್ಲಾ ಮರೆತು ಚೈತ್ರಾ ನಿವಾಸಕ್ಕೆ ಮಂಜು ತೆರಳಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. ಬಿಗ್ ಬಾಸ್ ಶೋ ಮುಗಿದ್ಮೇಲೆಯೂ ಕೋಪವನ್ನು ಮುಂದುವರೆಸದೇ ಸ್ನೇಹದಿಂದ ಇರೋದನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೈತ್ರಾ ಮತ್ತು ಶ್ರೀಕಾಂತ್ 12 ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಸಮ್ಮತಿಯೊಂದಿಗೆ ಪ್ರೀತಿಸಿದ ಹುಡುಗನೊಂದಿಗೆ ಸರಳ ವಿವಾಹವಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಕ್ಕೆ ಆಪ್ತರಾದ 100 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿತ್ತು. ವೈದಿಕ ಶಾಸ್ತçದಂತೆ ಮದುವೆ ಕಾರ್ಯಕ್ರಮ ನಡೆದಿದೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್, ಗೋಲ್ಡ್ ಸುರೇಶ್ ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದ್ದರು.
ಕಾಲೇಜಿನಲ್ಲಿ ಓದುತ್ತಿದ್ದಾಗ ಚೈತ್ರಾಗೆ ಶ್ರೀಕಾಂತ್ ಕಶ್ಯಪ್ ಪರಿಚಯವಾಗಿತ್ತು. ಬಹುಕಾಲದ ಗೆಳೆಯನ ಜೊತೆ ಚೈತ್ರಾ ಮದುವೆಯಾಗಿದ್ದಾರೆ. ಆ್ಯನಿಮೇಷನ್ ಕೋರ್ಸ್ ಮಾಡಿರುವ ಶ್ರೀಕಾಂತ್ ಕಶ್ಯಪ್ ಸುದ್ದಿವಾಹಿನಿವೊಂದರಲ್ಲಿ ಚೈತ್ರಾ ಜೊತೆ ಕೆಲಸ ಮಾಡಿದ್ದರು. ಇದೀಗ ಜ್ಯೋತಿಷ್ಯ, ವಾಸ್ತು, ಪೌರೋಹಿತ್ಯದ ಕೆಲಸದಲ್ಲಿ ಶ್ರೀಕಾಂತ್ ತೊಡಗಿಸಿಕೊಂಡಿದ್ದಾರೆ.