ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಕ್ಯಾಪ್ಟನ್ ಉಗ್ರಂ ಮಂಜು (Ugramm manju) ಮಹಾರಾಜರಾಗಿ ಆಳುತ್ತಿದ್ದಾರೆ. ರಾಜನ ದರ್ಬಾರ್ ನಡುವೆ ಮೋಕ್ಷಿತಾರನ್ನು ಯುವರಾಣಿಯನ್ನಾಗಿ ಬಿಗ್ ಬಾಸ್ ಘೋಷಿಸಿ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ವಿಂಗಡಿಸಿದ್ದಾರೆ. ಹೀಗಿರುವಾಗ ಟಾಸ್ಕ್ ವೇಳೆ, ಉಗ್ರಂ ಮಂಜು, ರಜತ್ ನಡುವೆ ಕಿರಿಕ್ ನಡೆದಿದ್ದು, ಬುರುಡೆ ಒಡೆಯುವ ವಿಚಾರ ಬಂದಿದೆ. ಮತ್ತೆ ಮನೆಯಲ್ಲಿ ರಂಪಾಟ ಶುರುವಾಗಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?
ದೊಡ್ಮನೆಯಲ್ಲಿ ಯುವರಾಣಿ ಮೋಕ್ಷಿತಾ (Mokshitha Pai) ಅವರ ಬಣವಾದರೆ, ಇನ್ನೊಂದು ಕಡೆ ರಾಜ ಮಂಜಣ್ಣ ಬಣವಾಗಿದೆ. ಅಂತೆಯೇ ನಿನ್ನೆಯ ಎಪಿಸೋಡ್‌ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಗುದ್ದಾಟ ನಡೆದಿದೆ. ಇಂದು ಬಿಗ್ ಬಾಸ್ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಅದುವೇ ಮಣ್ಣಿನಿಂದ ಅಸ್ತ್ರ ಮಾಡೋದು. ಈ ವೇಳೆ, ಮನೆ ರಣರಂಗವಾಗಿದೆ.
ಈ ವೇಳೆ, ಮಣ್ಣಿನ ಉಂಡೆಗಳನ್ನು ಎತ್ತಿಕೊಳ್ಳುವಾಗ ಪ್ರಜೆಗಳ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಮಂಜು (Ugramm Manju) ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ವಾಕ್ಸಮರ ಶುರುವಾಗಿದೆ. ಮಂಜು ಬಣದ ಪ್ರಜೆಗಳು, ಮೋಕ್ಷಿತಾ ಬಣದ ಸದಸ್ಯರನ್ನು ತಳ್ಳಿ ಮಣ್ಣನ್ನು ಎತ್ತಿಕೊಂಡು ಹೋಗಿದ್ದಾರೆ. ಇದಕ್ಕೆ ಕೋಪಿಸಿಕೊಂಡ ರಜತ್, ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ರಜತ್ ವಾರ್ನಿಂಗ್ ಕೊಟ್ಟಿದ್ದಾರೆ.
View this post on Instagram
ಬಳಿಕ ಮಂಜು ಅಲ್ಲಿಗೆ ಎಂಟ್ರಿಯಾಗಿ ಬುರುಡೆ ಒಡಿತಿಯಾ ನೀನು? ಏನು ರೌಡಿಸಂ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕಿರುಚಾಡಿದ್ದಾರೆ. ಅದಕ್ಕೆ ಮತ್ತೆ ಕೌಂಟರ್ ಕೊಟ್ಟ ಮಂಜು, ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತ ಮಂಜು ಮುಂದೆ ತೊಡೆ ತಟ್ಟಿದ್ದಾರೆ.