ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್ಒಯು)ಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ) ಮತ್ತೆ ಮಾನ್ಯತೆ ನೀಡಿದೆ.
ಹೌದು. ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಮಾನ್ಯತೆ ನೀಡಲು ಒಪ್ಪಿದ್ದು, ಈ ಸಂಬಂಧ ಆಗಸ್ಟ್ 10ರೊಳಗಾಗಿ ಆದೇಶ ನೀಡಲಿದೆ ಎಂದು ತಿಳಿದು ಬಂದಿದೆ.
Advertisement
ಯುಜಿಸಿಯು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದು ಮಾಡಿದ್ದ ಹಿನ್ನೆಲೆಯಲ್ಲಿ, ಇಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದಗೌಡರು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿ ಮಾಡಿ ಕೆಎಸ್‍ಓಯುನ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದರು.
Advertisement
ಕಡತ ಕ್ಕೆ ಅನುಮೋದನೆ ನೀಡಿದೆ .ಇಂದು ಈ ಸಂಬಂಧ ನಾನು ಸಚಿವ ಶ್ರೀ ಪ್ರಕಾಶ್ ಜಾವಡೇಕರ್ರವರನ್ನು ಭೇಟಿ ಮಾಡಿದ್ದೆ . I Thank Sri @PrakashJavdekar ji for Timely Action to get UGC recognition to Karnataka State Open University pic.twitter.com/0mtnVYo054
— Sadananda Gowda (@DVSadanandGowda) August 3, 2018
Advertisement
ಕೇಂದ್ರ ಸಚಿವ ಸದಾನಂದಗೌಡ ಮನವಿಗೆ ಸ್ಪಂದಿಸಿದ ಮಾನವ ಸಂಪನ್ಮೂಲ ಇಲಾಖೆಯು ಕೆಎಸ್‍ಓಯುಗೆ ಮಾನ್ಯತೆ ನೀಡಲು ಒಪ್ಪಿಗೆ ನೀಡಿದ್ದು, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಯುಜಿಸಿ ಮಾನ್ಯತೆಯನ್ನು ನೀಡುವಂತೆ, ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಯುಜಿಸಿ ಗೆ ಕಡತ ರವಾನಿಸಿದೆ.
Advertisement
ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರಕಾರವು ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಬರೆದು ಡಿವಿ ಸದಾನಂದ ಗೌಡ ಟ್ವೀಟ್ ಮಾಡಿದ್ದಾರೆ.
ಅನಿಶ್ಚಿತತೆಯ ತೂಗುಯ್ಯಾಲೆಯಲ್ಲಿದ್ದ ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಗಳ ಭವಿಷ್ಯವನ್ನು ನಿಶ್ಚಿತ ಗುರಿ ಮುಟ್ಟಿಸುವಲ್ಲಿ ಕೇಂದ್ರ ಸರಕಾರವು ದಿಟ್ಟ ಹೆಜ್ಜೆ ಇಟ್ಟಿದೆ . ಕರ್ನಾಟಕ ಮುಕ್ತ ವಿಶ್ವ ವಿದ್ಯಾ ನಿಲಯಕ್ಕೆ ಯು ಜಿ ಸಿ ಮಾನ್ಯತೆಯನ್ನು ನೀಡುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ಸಂಬಂಧಪಟ್ಟ 1/2
— Sadananda Gowda (@DVSadanandGowda) August 3, 2018
https://www.youtube.com/watch?v=CAKZXF9tw0w
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews