-ಯುಜಿ ಆಯುಷ್: ಮತ್ತೊಂದು ಸುತ್ತು ಕೌನ್ಸೆಲಿಂಗ್
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸೋಮವಾರ (ಡಿ.15) ಪ್ರಕಟಿಸಿದೆ.
ಆಕ್ಷೇಪಣೆಗಳು ಇದ್ದಲ್ಲಿ ಡಿ.16ರಂದು ಬೆಳಿಗ್ಗೆ 10ಗಂಟೆಯೊಳಗೆ ಪ್ರಾಧಿಕಾರಕ್ಕೆ ಇ-ಮೇಲ್ (keauthority-ka@nic.in) ಮೂಲಕ ತಿಳಿಸಬೇಕು. ಬಳಿಕ ಡಿ.16ರಂದು ಬೆಳಿಗ್ಗೆ 11 ಗಂಟೆ ನಂತರ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.17ರಂದು ಸಂಜೆ 4 ಗಂಟೆಯೊಳಗೆ ಶುಲ್ಕ ಪಾವತಿಸಿ (ವೈದ್ಯಕೀಯ ಶುಲ್ಕ ಠೇವಣಿ ಕಡಿತ ಮಾಡಿಕೊಂಡು), ಸೀಟು ಖಾತರಿ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಸಂಜೆ 6 ಗಂಟೆ ಒಳಗೆ ಸಂಬಂಧಪಟ್ಟ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ತಿಳಿಸಿದ್ದಾರೆ.ಇದನ್ನೂ ಓದಿ: KSET: ಡಿ.22ರಿಂದ 24ರವರೆಗೆ ಪರಿಶಿಷ್ಟ ಜಾತಿಯ ಒಳಮೀಸಲಾತಿ ದಾಖಲೆ ಪರಿಶೀಲನೆ-ಕೆಇಎ
ಯುಜಿ ಆಯುಷ್: ಮತ್ತೊಂದು ಸುತ್ತು ಕೌನ್ಸೆಲಿಂಗ್
ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಅಂತಿಮ ಹಾಗೂ ನಾಲ್ಕನೇ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆ ಮಾಡುತ್ತಿದ್ದು, ಸೀಟು ಹಂಚಿಕೆಯಾದವರು ಡಿ.20ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು ಹಾಗೂ ತಾವು ತೆಗೆದುಕೊಳ್ಳಬಹುದಾದ ಸೀಟಿನ ಪೂರ್ಣ ಶುಲ್ಕದ ಡಿಡಿ ಸಮೇತ ಡಿ.17ರಂದು ಮಧ್ಯಾಹ್ನ 2 ಗಂಟೆಯೊಳಗೆ ಖುದ್ದಾಗಿ ಕೆಇಎ ಕಚೇರಿಯಲ್ಲಿ ಸಲ್ಲಿಸಬೇಕು. ಅದರ ನಂತರ ಡಿ.18ರಂದು ಬೆಳಿಗ್ಗೆ 11 ಗಂಟೆವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ವಿವರಿಸಿದ್ದಾರೆ.
ಇದುವರೆಗೂ ನೋಂದಣಿ ಮಾಡದಿರುವ ವೈ ಕ್ಲಾಸ್ ಅಭ್ಯರ್ಥಿಗಳು ಕೂಡ ಡಿ.17ರಂದು ಕೆಇಎ ಕಚೇರಿಗೆ ಬಂದು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಡಿ.18ರಂದು ಸಂಜೆ 5ಗಂಟೆ ನಂತರ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೀಟು ಹಂಚಿಕೆಯಾದವರು ಡಿ.20ರೊಳಗೆ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ:ಅಪಘಾತ ರಹಿತ ಸೇವೆ ಸಲ್ಲಿಸೋ KSRTC ಚಾಲಕರಿಗೆ ಪ್ರೋತ್ಸಾಹ ಧನ ಹೆಚ್ಚಳ

