ಉಡುಪಿ: ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ನಮಗೆ ಮ್ಯಾಕ್ಲಿನ್ ಫೋನ್ ಮಾಡಿದ್ದೇ ಕಡೆ. ಆನಂತರ ಯಾವುದೇ ಸಂದೇಶ ಬಂದಿಲ್ಲ. 24 ಗಂಟೆ ನಂತರ ಸಂಪರ್ಕ ಮಾಡುವುದಾಗಿ ಹೇಳಿದ್ದಾರೆ. ಖಾರ್ಕೀವ್ ನಲ್ಲಿ ಇರುವ 40 ಜನ ವಿದ್ಯಾರ್ಥಿಗಳ ಗುಂಪು ಎಲ್ಲಿದೆ, ಹೇಗಿದೆ ಎಂಬ ಮಾಹಿತಿಯಾದರೂ ಕೊಡಿ ಉಡುಪಿಯ ಮೆಲ್ವಿನ್ ಮತ್ತು ಐಡಾ ದಂಪತಿ ಕಣ್ಣೀರಿಟ್ಟು ವಿನಂತಿ ಮಾಡಿದ್ದಾರೆ.
Advertisement
ಉಡುಪಿಯ ಕೆಮ್ಮಣ್ಣು ನಿವಾಸಿ ಮೆಲ್ವಿನ್ ರೊಡ್ರಿಗಸ್ ಮತ್ತು ಐಡಾ ದಂಪತಿ ಪುತ್ರ ಗ್ಲೆನ್ವಿಲ್ ಮ್ಯಾಕ್ಲಿನ್ ರೋಡ್ರೀಗಸ್ ಉಕ್ರೇನಲ್ಲಿ ಎಂಬಿಬಿಎಸ್ ಮಾಡುತ್ತಿದ್ದು, ರಷ್ಯಾ ದಾಳಿಗೆ ಸಿಲುಕಿದ್ದಾರೆ. ಸುಮಾರು 40 ವಿದ್ಯಾರ್ಥಿಗಳ ಗುಂಪು ಖಾರ್ಕಿವ್ ಹಾಸ್ಟೆಲ್ ನಿಂದ ಸುಮಾರು 30 ಕಿಲೋಮೀಟರ್ ನಡೆದುಕೊಂಡು ಹೋಗಿ ಖಾರ್ಕಿವ್ ಪಟ್ಟಣದ ವ್ಯಾಪ್ತಿಯಿಂದ ಹೊರಗೆ ಇದ್ದಾರೆ.
Advertisement
Advertisement
ಹಾಸ್ಟೆಲ್‍ನಿಂದ ಎಂಟು ಕಿಲೋಮೀಟರ್ ದೂರದಲ್ಲಿ ರೈಲ್ವೆ ಸ್ಟೇಷನ್ ಇದೆ. ರಾಯಬಾರಿ ಕಚೇರಿಯಿಂದ ಬಂದ ಮಾಹಿತಿ ಪ್ರಕಾರ ಯಾವುದೇ ಲಗೇಜುಗಳನ್ನು ತೆಗೆದುಕೊಂಡು ಹೋಗಬಾರದು. ಕೇವಲ ಒರಿಜಿನಲ್ ಡಾಕ್ಯುಮೆಂಟ್ ಮಾತ್ರ ತೆಗೆದುಕೊಂಡು ಹೋಗಬೇಕು ಎಂಬ ಸೂಚನೆ ಬಂದಿದೆ. ಒಂದು ಬ್ಯಾಗ್‍ನ ಜೊತೆ ಮ್ಯಾಕ್ಲಿನ್ ಹಾಸ್ಟೆಲಿನಿಂದ ಹೊರಟು ಹೋಗಿದ್ದಾರೆ ಎಂದು ತಂದೆ ಮೆಲ್ವಿನ್ ರೋಡ್ರೀಗಸ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.
Advertisement
ಖಾರ್ಕೀವ್ ಪಟ್ಟಣದಿಂದ ಸುಮಾರು 1500 ಕಿಲೋಮೀಟರ್ ದೂರ ಸಂಚಾರ ಮಾಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಫೋನ್ ನೆಟ್‍ವರ್ಕ್ ಸಿಗುವುದಿಲ್ಲ. 24 ಗಂಟೆಯ ನಂತರ ಸಂಪರ್ಕಿಸುತ್ತೇನೆ ಎಂದು ಮ್ಯಾಕ್ಲಿನ್ ಗ್ಲೆನ್ವಿಲ್ ಫೆರ್ನಾಂಡೀಸ್ ಹೇಳಿದ್ದಾನೆ. ಉಕ್ರೇನ್‍ನ ಲಿವ್ಯೂ ಪ್ರದೇಶಕ್ಕೆ ಬಂದು ತಲುಪಿದ ನಂತರ ಅಲ್ಲಿ ರಾಯಭಾರಿ ಕಚೇರಿ ಅಧಿಕಾರಿಗಳು ಉಕ್ರೇನ್ ಗಡಿ ದಾಟಿಸುತ್ತಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ
ರೈಲು ಲಿವ್ಯೂ ಪ್ರದೇಶಕ್ಕೆ ತಲುಪಿ, ಅಲ್ಲಿಂದ ಏರ್‍ಲಿಫ್ಟ್ ಆದರೆ ಎರಡು ದಿನಗಳ ಒಳಗೆ ಮ್ಯಾಕ್ಲಿನ್ ಉಡುಪಿಗೆ ತಲುಪಬಹುದು. ಅಲ್ಲಿಯ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುವುದರಿಂದ ಯಾವುದನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಂಡಿಯನ್ ಕಂಟ್ರೋಲ್ ರೂಮ್, ಡಿಸಿ ಕಚೇರಿಯಿಂದ ಮಾಹಿತಿ ಬರುತ್ತಿದೆ. ಶಿಫ್ಟ್ ಮಾಡುವ ಸಂಪೂರ್ಣ ಖರ್ಚುವೆಚ್ಚವನ್ನು ಸರ್ಕಾರ ನೋಡಿಕೊಳ್ಳುವುದಾಗಿ ನಮಗೆ ಭರವಸೆ ನೀಡಿದೆ. ದೆಹಲಿ ಗೆ ಬಂದು ಅಲ್ಲಿಂದ ಮುಂಬೈ ಮೂಲಕ ಉಡುಪಿಗೆ ಕಳುಹಿಸಬಹುದು ಅಥವಾ ಡೆಲ್ಲಿ ಇಂದ ಬೆಂಗಳೂರಿಗೆ ವಿಮಾನ ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮ್ಯಾಕ್ಲಿನ್ ನಮಗೇ ಧೈರ್ಯ ತುಂಬಿಸುತ್ತಿದ್ದಾನೆ. ಎಲ್ಲರೂ ಸೇಫ್ ಆಗಿದ್ದಾರೆ ಎಂದು ಮೆಲ್ವಿನ್ ಹೇಳಿದರು.
ತಾಯಿ ಐಡಾ ರೋಡ್ರೀಗಸ್ ಮಾತನಾಡಿ, ಹಾಸ್ಟೆಲ್ನಲ್ಲಿ ಮತ್ತು ಸೂಪರ್ ಬಜಾರ್ ಗಳಲ್ಲಿ ಸ್ಟಾಕ್ ಗಳು ಖಾಲಿ ಆಗುತ್ತಿರುವುದರಿಂದ ಬೇಕಾದಷ್ಟು ಆಹಾರ ಸಿಗುತ್ತಿಲ್ಲ. ಎರಡು ದಿನ ಉಪ್ಪಿಟ್ಟು ಮಾತ್ರ ತಿಂದು ದಿನ ಕಳೆದಿದ್ದಾರೆ. ಚಾಕಲೇಟು ಬ್ರೆಡ್ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಸಿಕ್ಕಿದ್ದನ್ನು ತಿಂದು ಜೀವ ಉಳಿಸುತ್ತಿದ್ದೇವೆ ಎಂದು ಮಗ ಹೇಳಿರುವುದನ್ನು ನೆನಪಿಸಿಕೊಂಡು ಐಡಾ ರೋಡ್ರೀಗಸ್ ಕಣ್ಣೀರಿಟ್ಟರು. ತಮ್ಮ ಬಂಕರ್ ನಲ್ಲಿ ಭಾರತದ 42ಜನ ವಿದ್ಯಾರ್ಥಿಗಳು ಸಿಲುಕಿದ್ದಾರೆ ಪಕ್ಕದ ಬಂಕರ್ ಗಳ ಬಗ್ಗೆ ಯಾವುದೇ ಮಾಹಿತಿಗಳು ಇಲ್ಲ. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಹಾಸ್ಟೆಲ್ ಬಿಲ್ಡಿಂಗ್‍ನ ಕೆಳ ಅಂತಸ್ತಿನಲ್ಲಿ ಸದ್ಯ ಉಳಿದುಕೊಂಡಿದ್ದ ವಿದ್ಯಾರ್ಥಿಗಳನ್ನು ಹಾಸ್ಟೆಲ್‍ನ ಕೊಠಡಿಗಳಿಗೆ ಬಿಡುತ್ತಿಲ್ಲ. ಕಳೆದ ಎರಡು ದಿನಗಳಿಂದ ಸುತ್ತಮುತ್ತ ವಿಪರೀತ ದಾಳಿ ಆಗುತ್ತಿರುವುದರಿಂದ ವಿದ್ಯಾರ್ಥಿಗಳು ಲಿವ್ಯೂ ತಲುಪಿದ ನಂತರ ಯಾವ ದೇಶದ ಗಡಿಯ ಮೂಲಕ ಏರ್ಲಿಫ್ಟ್ ಮಾಡುತ್ತಾರೆ ಎಂಬ ಬಗ್ಗೆ ಅವನಿಗೂ ಮಾಹಿತಿ ಇಲ್ಲ. ನಮ್ಮ ಮಕ್ಕಳು ಎಲ್ಲಿದ್ದಾರೆ ಎಂಬ ಮಾಹಿತಿಯಾದರು ಕೊಡಿ ಎಂದು ಮೆಲ್ವಿಲ್ ಐಡಾ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.