ಉಡುಪಿ: ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವುದಾಗಿ ಶಾಸಕ ರಘುಪತಿ ಭಟ್ ಆಕ್ರೋಶ ಹೊರಹಾಕಿದ್ದಾರೆ.
ಹಿಜಬ್ ಹೈಡ್ರಾಮಾ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಿಯಾ ರೇಶಂ ಹಿಜಬ್ ತೆಗೆದು ಹಾಲ್ ಟಿಕೆಟ್ ತೆಗೆದುಕೊಂಡಿದ್ದರು. ಹಾಲ್ ಟಿಕೆಟ್ ಪಡೆಯಲು ನಿನ್ನೆ ಸಂಜೆಯವರೆಗೆ ಅವಕಾಶ ಕೊಡಲಾಗಿತ್ತು. ಕಾಲೇಜಿನಿಂದ ಫೋನ್ ಮಾಡಿ ಅವರಿಗೆ ಹಾಲ್ ಟಿಕೆಟ್ ಬಗ್ಗೆ ಹೇಳಲಾಗಿತ್ತು. ಪೋಷಕರಿಗೂ ಕೂಡ ಹಾಲ್ ಟಿಕೆಟ್ ಪಡೆಯುವ ಬಗ್ಗೆ ಮನವರಿಕೆ ಮಾಡಲಾಗಿತ್ತು ಎಂದರು.
Advertisement
Advertisement
ಬೆಳಗ್ಗೆ 9.30ರ ನಂತರ ಹಾಲ್ ಟಿಕೆಟ್‍ಗೆ ಕಾಲೇಜಿಗೆ ಬಂದಿದ್ದಾರೆ. ಹಿಜಬ್ ತೆಗೆದು ಪರೀಕ್ಷೆ ಬರೆಯುವುದಾಗಿ ಒಪ್ಪಿದ್ದಾರೆ. ಹಾಲ್ ಟಿಕೆಟ್ ತೆಗೆದುಕೊಳ್ಳುವಾಗಲೂ ವಿದ್ಯಾರ್ಥಿಗಳು ಹಿಜಬನ್ನು ತೆಗೆದು ಇಟ್ಟಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಡ್ರಾಮಾ ಮಾಡಿದ್ದಾರೆ ಎಂದು ಶಾಸಕರು ಕಿಡಿಕಾರಿದರು.
Advertisement
Advertisement
ಇದೇ ರೀತಿ ನಾಳೆಯೂ ಡ್ರಾಮಾ ಮುಂದುವರಿದರೆ ಕ್ರಿಮಿನಲ್ ಕೇಸ್, ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುತ್ತೇವೆ. ಈ ಕುರಿತು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜೊತೆ ನಾನು ಈಗಾಗಲೇ ಮಾತನಾಡಿದ್ದೇನೆ. ನಾಳೆಯಿಂದ ನಾಟಕ ಮಾಡಿದರೆ ಕಂಡಂಕ್ಟ್ ಆಫ್ ಕೋರ್ಟು ಕೇಸು ದಾಖಲಿಸುತ್ತೇವೆ. ಪರೀಕ್ಷಾ ಕೇಂದ್ರದಲ್ಲಿ ಹುಡುಗಾಟಿಕೆ ಮಾಡುವಂತಿಲ್ಲ. ಈ ಮಕ್ಕಳನ್ನು ನಾವು ಇನ್ನು ಮುಂದೆ ಲಘುವಾಗಿ ಪರಿಗಣಿಸುವುದಿಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕ್ರಿಮಿನಲ್ ಕೇಸು ಹಾಕಿ ಎಂದು ಆಗ್ರಹ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಪರೀಕ್ಷಾ ಕೇಂದ್ರದಲ್ಲೂ ಹಿಜಬ್ ವಿದ್ಯಾರ್ಥಿನಿಯರ ಹೈಡ್ರಾಮಾ – ಮನೆಗೆ ನಡೆದ ವಿದ್ಯಾರ್ಥಿನಿಯರು
ಹಿಜಬ್ ಮತ್ತು ಪರೀಕ್ಷೆಗೆ ಯಾವುದೇ ಸಂಬಂಧ ಇಲ್ಲ ಎಂದು ಜಡ್ಜ್ ಹೇಳಿದ್ದಾರೆ. ಇವರ ನಡವಳಿಕೆ ನೋಡಿದರೆ ಪರೀಕ್ಷೆ ಬರೆಯುವ ರೀತಿ ಇಲ್ಲ. ಇವರು ಡ್ರಾಮಾ ಕ್ರಿಯೇಟ್ ಮಾಡಲು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಅಶಿಸ್ತಿನ ವಿದ್ಯಾರ್ಥಿಗಳು ನಮ್ಮ ಕಾಲೇಜಿನ ವಾತಾವರಣ ಹಾಳುಮಾಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವುದು ಇವರ ಉದ್ದೇಶ. ಹಾಗಿದ್ರೆ ಹಾಲ್‍ಟಿಕೆ ತೆಗೆದುಕೊಳ್ಳುವಾಗ ಹಿಜಬ್ ತೆಗೆದದ್ದು ಯಾಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಿಯು ಪರೀಕ್ಷಾ ಕೇಂದ್ರದಲ್ಲೂ ಹಿಜಬ್ ವಿದ್ಯಾರ್ಥಿನಿಯರ ಹೈಡ್ರಾಮಾ – ತಹಶೀಲ್ದಾರ್ ಎಂಟ್ರಿ
ಈ ಆರು ವಿದ್ಯಾರ್ಥಿಗಳು ಹೈಕೋರ್ಟ್ ಗಿಂತ ಮೇಲೆಯಾ?. ದಾರಿಯಲ್ಲಿ ಬಿಟ್ಟ ಪುಂಡಾಡಿಕೆಯವರು ಇವರು. ಪರೀಕ್ಷಾ ಕೇಂದ್ರದಿಂದ ಹಲವಾರು ವಿದ್ಯಾರ್ಥಿಗಳ ಪೋಷಕರು ನನಗೆ ಕರೆ ಮಾಡಿದರು. ಎಕ್ಸಾಮಿನೇಶನ್ ಅಧಿಕಾರಿ ಹೇಳಿದರೂ ಅವರ ಮಾತನ್ನು ಕೇಳಿಲ್ಲ. ಈ ವಿದ್ಯಾರ್ಥಿಗಳು ಸಮಾಜದ ಶಾಂತಿಗೆ ಭಂಗ ತರುವ ಉದ್ದೇಶದಿಂದಲೇ ಇರುವಂಥವರು. ಕ್ರಿಮಿನಲ್ ಮೊಕದ್ದಮೆ ಹೂಡದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ಹಾಕುತ್ತೇವೆ. ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ನಾನು ಆಗ್ರಹ ಮಾಡುತ್ತೇನೆ. ಈ ವಿದ್ಯಾರ್ಥಿಗಳು, ಪೋಷಕರು ಅನ್ನ ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿ ಶಾಸಕರು ಕಿಡಿಕಾರಿದರು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಹಿಜಬ್ ಹೋರಾಟಗಾರ್ತಿಯರು