ಉಡುಪಿ: ಜಿಲ್ಲೆಯ ಮಲ್ಪೆ ಬೀಚ್ ಗೆ ಬಾಂಬ್ ಹಾಕ್ತೇನೆ. ಎಲ್ಲರನ್ನು ಉಡಾಯಿಸಿ ಬಿಡ್ತೇನೆ ಎಂದು ಯುವಕನೊಬ್ಬ ಹೇಳಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಅರ್ಧ ಮುಖ ಮುಚ್ಚಿಕೊಂಡು ಸೆಲ್ಫಿ ವಿಡಿಯೋ ಮಾಡಿರುವ ಕಿಡಿಗೇಡಿ ಯುವಕ, ನಮ್ಮ ಮುಂದಿನ ಟಾರ್ಗೆಟ್ ಮಲ್ಪೆ ಬೀಚ್ ಆಗಿದೆ. ಇಲ್ಲಿನ ಅಂಗಡಿಗಳನ್ನು ಬಾಂಬ್ ಹಾಕಿ ಉಡಾಯಿಸುತ್ತೇವೆ. ಬಾಂಬ್ ಹಾಕುವ ಮೂಲಕ ಅವಿತುಕೊಂಡವರನ್ನು ಹೊರಗೆಳೆದು ಮುಗಿಸುತ್ತೇವೆ ಎಂದು ಹೇಳಿದ್ದಾನೆ.
ಒಂದೂವರೆ ನಿಮಿಷದ ನಿಮಿಷದ ವಿಡಿಯೋದಲ್ಲಿ ಯುವಕ ಅವಾಚ್ಯ ರೀತಿಯಲ್ಲಿ ಮಾತನಾಡುತ್ತಾನೆ. ಪಾಕಿಸ್ತಾನ್ ಜಿಂದಾಬಾದ್ ಹೇಳುತ್ತಾನೆ. ಆಮೇಲೆ ನಗ್ತಾನೆ. ಹೀಗಾಗಿ ಇದು ಕಿಡಿಗೇಡಿಯ ಕೃತ್ಯ ಅನ್ನೋದು ಸ್ಪಷ್ಟವಾಗುತ್ತದೆ. ಹಿಂದಿಯಲ್ಲಿ ಮಾತನಾಡಿರುವ ಕಿಡಿಗೇಡಿ, ಉತ್ತರ ಭಾರತೀಯನ ಉಚ್ಚಾರದಂತೆ ಕೇಳಿಸುತ್ತಿದೆ.
ಮಲ್ಪೆ ಪೊಲೀಸರು ವಿಡಿಯೋದ ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv