ಉಡುಪಿ: ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆ ಮತ್ತೊಂದು ರೆಕಾರ್ಡ್ ಆರ್ಟ್ ಮಾಡಿದ್ದಾರೆ. ಅಶ್ವಥ ಎಲೆಯಲ್ಲಿ ಅತ್ಯಂತ ಸೂಕ್ಷ್ಮವಾಗಿ ಬ್ಲೇಡ್ ಸಹಾಯದಿಂದ ಕ್ರಿಕೆಟ್‍ನ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಕೇವಲ 7 ನಿಮಿಷದಲ್ಲಿ ಲೀಫ್ ಆರ್ಟ್ ರಚಿಸಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ.
ಸಚಿನ್ ಅಪರೂಪದ ಫೋಟೋಗಳು ಮತ್ತು ಸಹಿ ಇರುವ ಸರ್ಟಿಫಿಕೇಟ್‍ಗಳು ಮಹೇಶ್ ಕೈ ಸೇರಿದೆ. 2015ರಲ್ಲಿ 3,500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿಕಡ್ಡಿಯಿಂದ ರಚಿಸಿದ ಗಣಪತಿಯ ಕಲಾಕೃತಿಯ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರ್ಪಡೆಯಾಗಿ ಸಾಧನೆ ಮಾಡಿದ್ದರು. ಇದನ್ನೂ ಓದಿ: ಮೈಸೂರು ಅಭಿವೃದ್ಧಿ ಬಗ್ಗೆ ಸಿದ್ದರಾಮಯ್ಯರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ: ಪ್ರತಾಪ್ ಸಿಂಹ ಆಹ್ವಾನ
Advertisement
Advertisement
ವೀಡಿಯೋ ರೆಕಾರ್ಡ್
ಅಶ್ವಥ ಎಲೆಯಲ್ಲಿ ಬ್ಲೇಡ್ ಮೂಲಕ ಸಚಿನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು 7 ನಿಮಿಷದಲ್ಲಿ ರಚಿಸಿದ ವೀಡಿಯೋವನ್ನು ಉತ್ತರಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನಕ್ಕೆ ಪಟ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ಪ್ರಭು, ವಕೀಲರಾದ ಸಂತೋಷ್ ಕುಮಾರ್ ಮೂಡುಬೆಳ್ಳೆ, ಅರೂರು ಸುಕೇಶ್ ಶೆಟ್ಟಿ ಇವರ ಸಾಕ್ಷಿಗಳೊಂದಿಗೆ ಕಳುಹಿಸಲಾಗಿತ್ತು. ವೀಡಿಯೋ ವೀಕ್ಷಿಸಿದ ಸಂಸ್ಥೆಯು ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿ ಎಕ್ಸ್‌ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಮಹೇಶ್ ಅವರ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.
Advertisement
Advertisement
ಮಹೇಶ್ ಹಿನ್ನೆಲೆ
ಮರ್ಣೆ ಶ್ರೀಧರ್ ಆಚಾರ್ಯ ಮತ್ತು ಲಲಿತಾ ದಂಪತಿ ಪುತ್ರರಾಗಿರುವ ಮಹೇಶ್ ಆಚಾರ್ಯ ಅವರು ಪ್ರಸ್ತುತ ಮಣಿಪಾಲದ ಭಾರಧ್ವಜ್ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಿಯಾಗಿರುತ್ತಾರೆ. ನಟರು, ರಾಜಕಾರಣಿಗಳು, ಸ್ವಾಮೀಜಿಗಳ ಫೋಟೋಗಳನ್ನು ಮಹೇಶ್ ಕಾಲಕಾಲಕ್ಕೆ ರಚಿಸಿ ಅವರಿಗೆ ನೀಡುತ್ತಾರೆ. ಇದನ್ನೂ ಓದಿ: ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!