ಉಡುಪಿ: ಒಂದೊಂದು ವೋಟ್ ಕೂಡಾ ಬಹಳ ಪ್ರಾಮುಖ್ಯತೆ ಹೊಂದಿರುತ್ತದೆ ಅನ್ನೋದು ಒಂದು ವೋಟಿನಲ್ಲಿ ಗೆದ್ದವರಿಗೆ ಮತ್ತು ಒಂದು ವೋಟಲ್ಲಿ ಸೋತವರಿಗೆ ಗೊತ್ತಿರುತ್ತದೆ. ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತಿಯ ವಾರ್ಡ್ ನಂಬರ್ 4 ರಲ್ಲಿ ಒಂದು ಓಟಿನಿಂದ ಒಬ್ಬರು ಗೆದ್ದರೆ ಎದುರಾಳಿ ಒಂದು ಓಟಿನ ಅಂತರದಲ್ಲಿ ಸೋತಿದ್ದಾರೆ.
ಸಾಲಿಗ್ರಾಮದ ವಾರ್ಡ್ ನಂಬರ್ 4 ರಲ್ಲಿ ಬಿಜೆಪಿಯಿಂದ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಕರುಣಾಕರ್ ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಎದುರಾಳಿ ಕಾಂಗ್ರೆಸ್ ನಿಂದ ಪುನೀತ್ ಪೂಜಾರಿ ಎಂಬ ಯುವಕ ಮೊದಲ ಬಾರಿ ಸ್ಪರ್ಧೆ ಮಾಡಿದ್ದರು. ಮೂರು ಮೂರು ಬಾರಿ ಮತ ಎಣಿಕೆ ಮಾಡಿದರೂ ಇವರಿಬ್ಬರ ನಡುವೆ ಮ್ಯಾಚ್ ಟೈ ಆಗಿತ್ತು.
Advertisement
Advertisement
ಕಾಂಗ್ರೆಸ್ ನ ಪುನೀತ್ ಪೂಜಾರಿಗೆ 254 ಮತ ಹಾಗೂ ಬಿಜೆಪಿಯ ಕರುಣಾಕರ ಅವರಿಗೂ 254 ವೋಟ್ ಬಿದ್ದಿತ್ತು. ಆಗ ಚುನಾವಣೆ ಎಂಬ ಪಂದ್ಯದ ದಿಕ್ಕು ಬದಲಿಸಿದ್ದು, ಆ ಒಂದು ಅಂಚೆ ಮತ. ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ವಾರ್ಡ್ ಸಂಖ್ಯೆ 4 ರಲ್ಲಿ ಒಬ್ಬರು ಅಂಚೆ ಮೂಲಕ ಕಾಂಗ್ರೆಸ್ ಗೆ ವೋಟ್ ಮಾಡಿದ್ದರು. ಆ ಒಂದು ಮತ ಟೈಲ್ಸ್ ಫಿಟ್ಟಿಂಗ್ ಮಾಡುವ ಪುನೀತ್ ಪೂಜಾರಿಯನ್ನು ಸಾಲಿಗ್ರಾಮ ಪಟ್ಟಣ ಪಂಚಾಯತಿಯ 16 ಬಳಗದೊಳಗೆ ಫಿಕ್ಸ್ ಮಾಡಿದೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪುನೀತ್, ಕಾಂಗ್ರೆಸ್ ಪಕ್ಷ ಮತ್ತು ನನ್ನ ಆತ್ಮೀಯ ಸ್ನೇಹಿತರ ಹಗಲಿರುಳಿನ ಪ್ರಯತ್ನದಲ್ಲಿ ಈ ಗೆಲುವು ಸಾಧ್ಯವಾಗಿದೆ. ಬಿಜೆಪಿಯ ಕರುಣಾಕರ್ ಅವರಿಗೆ ನನಗಿಂತ ಒಂದು ಮತ ಕಡಿಮೆ ಬಂದಿದೆ. ಮುಂದಿನ 5 ವರ್ಷ ಅವರ ಅನುಭವ ಮತ್ತು ಸಹಕಾರವನ್ನು ಪಡೆದು ಕೆಲಸ ಮಾಡುತ್ತೇನೆ ಎಂದು ಹೇಳಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv