ಉಡುಪಿ: ಹಿಜಬ್ ಹಕ್ಕಿಗಾಗಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಸೈಪ್ ಹಲ್ಲೆಗೊಳಗಾದ ಯುವಕ. ಮಲ್ಪೆಯಲ್ಲಿರುವ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೋಟೆಲ್ಗೆ ಆಗಮಿಸಿದ 70 -100 ಮಂದಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಬಳಿಕ ದುಷ್ಕರ್ಮಿಗಳು ಹೊಟೇಲ್ನಲ್ಲಿದ್ದ ಅವರ ಮಗ ಸೈಪ್(20) ಮೇಲೂ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಹಿಜಬ್ಧಾರಿಗೆ ಬ್ಯಾಂಕ್ ವಹಿವಾಟ ನಡೆಸದಂತೆ ನಿರ್ಬಂಧ
Advertisement
Advertisement
ಹಲ್ಲೆಗೆ ಒಳಗಾಗಿರುವ ಸೈಫ್ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದೆ. ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹಿಜಬ್ ದೂರುದಾರೆ ಹಜ್ರಾ ಶಿಫಾ ಟ್ವೀಟ್ ಮಾಡಿ, ಹಿಜಬ್ನ್ನು ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ಹೊಟೇಲ್ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸಂಘಪರಿವಾರದ ಯುವಕರಿಂದ ಹಲ್ಲೆ ಎಂಬ ಆರೋಪಿಸಿದ್ದಾರೆ. ಇದನ್ನೂ ಓದಿ: ಕೊಲೆಯಾದ ಹರ್ಷನನ್ನು ಭಯೋತ್ಪಾದಕ ಎಂದ ವಿದೇಶಿ ಪತ್ರಕರ್ತ- ಡಿಜಿಪಿ ಸ್ಪಷ್ಟನೆ