ಉಡುಪಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಅನ್ನೋದು ಕೋಟಿ ಕೋಟಿ ಹಿಂದೂಗಳ ಕನಸು. ಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಲವಾರು ಬೆಳವಣಿಗೆಗಳು ದೇಶದಲ್ಲಿ ನಡೆಯುತ್ತಿದೆ. ಎರಡು ಕಾಲು ನೋವಿರುವ ವಯೋವೃದ್ಧರು ನಮ್ಮ ರಾಜ್ಯದಿಂದ ಅಯೋಧ್ಯೆಗೆ ಹೊರಟಿದ್ದಾರೆ.
Advertisement
ಹೌದು. ಕರ್ನಾಟಕದ ವಿಶೇಷ ಭಕ್ತರೊಬ್ಬರು ಅಯೋಧ್ಯೆಗೆ ಗಾಲಿಕುರ್ಚಿಯಲ್ಲಿ ಹೊರಟಿದ್ದಾರೆ. ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಸಂದರ್ಶನ ಮಾಡುತ್ತಾ, ರಾಮಲಲ್ಲಾನನ್ನು ನೋಡಲು ಮಂಜುನಾಥ ತೆರಳುತ್ತಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿಕೊಟ್ಟು ದಾರಿಯಲ್ಲಿರುವ ಎಲ್ಲಾ ಕ್ಷೇತ್ರ ಭೇಟಿ ಮಾಡುತ್ತಿದ್ದಾರೆ.
Advertisement
Advertisement
ಒಂದೆರಡು ತಿಂಗಳಲ್ಲಿ ಅಯೋಧ್ಯೆ ತಲುಪುವ ಲೆಕ್ಕಾಚಾರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆ ಸವದತ್ತಿ ಮೂಲದ ಮಂಜುನಾಥ್, ಹರಿದ್ವಾರ, ಮಥುರಾ, ಆಗ್ರಾ ಮಹಾರಾಷ್ಟ್ರ ಖಂಡ್ವಾ ಪಂಡರಪುರ ಮಹಾಲಕ್ಷ್ಮಿ ಕೊಲ್ಹಾಪುರ ಕೂಡಲಸಂಗಮ, ತಮಿಳುನಾಡು, ತಿರುಪತಿ, ತಿರುಮಲ, ತಿರುಚಿ ಕನ್ಯಾಕುಮಾರಿ, ರಾಮೇಶ್ವರ ಕ್ಷೇತ್ರಗಳನ್ನು ಸುತ್ತಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗಲಿರುವ ವಿಶ್ವದರ್ಜೆಯ ವಿಮಾನ, ರೈಲು ನಿಲ್ದಾಣದ ವಿಶೇಷತೆಗಳು ಏನು?
Advertisement
ಯುವಕನಾಗಿದ್ದಾಗ ಬೈಕ್, ಆಮೇಲೆ ಸೈಕಲ್ ಈಗ ಗಾಲಿಕುರ್ಚಿಯ ಮೂಲಕ ಮಂಜುನಾಥ್ ಯಾತ್ರೆ ಹೊರಟಿದ್ದಾರೆ. ಮo- ಮಂದಿರದಲ್ಲಿ ತಂಗಿ ಮುಂದಿನ ಕ್ಷೇತ್ರಕ್ಕೆ ತೆರಳುತ್ತಾರೆ. ಊಟ-ಉಪಹಾರ ಎಲ್ಲವೂ ಉಚಿತವಾಗಿಯೇ ಆಗುತ್ತದೆ. ಸಂತ ರವಿದಾಸರು ನನ್ನೊಳಗೆ ಅಂತರ್ಗತರು ಎನ್ನುತ್ತಾ, ರಾಮ – ಹನುಮನ ಧ್ವಜದ ರಕ್ಷೆಯೊಂದಿಗೆ ತೆರಳುತ್ತಿದ್ದೇನೆ ಎಂದು ಭಕ್ತಿಯ ಮಾತುಗಳನ್ನಾಡುತ್ತಾರೆ.