ಚೆನ್ನೈ: ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (Stalin) ಅವರ ಪುತ್ರ, ತಮಿಳುನಾಡು (Tamil Nadu) ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರು ಉಪಮುಖ್ಯಮಂತ್ರಿ ಹುದ್ದೆಗೆ ಏರುವ ಸಾಧ್ಯತೆಯಿದೆ.
ಉದಯನಿಧಿ ಅವರ ನೇಮಕದ ಕುರಿತು ಶೀಘ್ರವೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಆಧಾರಿಸಿ ವರದಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉದಯನಿಧಿ ಅವರು, ಇದು ಕೇವಲ ವಂದತಿ ಅಷ್ಟೇ. ನೀವು ಸಿಎಂ ಅವರಿಗೆ ಪ್ರಶ್ನೆ ಕೇಳಿ. ಈ ಬಗ್ಗೆ ಸಿಎಂ ಮಾತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಉತ್ತರಿಸಿದರು.
ಈ ವರ್ಷದ ಜುಲೈನಲ್ಲಿ ನಮ್ಮ ಸರ್ಕಾರದ ಎಲ್ಲಾ ಮಂತ್ರಿಗಳು ಉಪಮುಖ್ಯಮಂತ್ರಿಗಳು ಎಂದು ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದರು.
ಚೆಪಾಕ್-ತಿರುವಲ್ಲಿಕೇಣಿ ವಿಧಾನಸಭಾ ಕ್ಷೇತ್ರದಿಂದ ಗೆದ್ದ ಒಂದು ವರ್ಷದ ನಂತರ, ಡಿಸೆಂಬರ್ 2022 ರಲ್ಲಿ ಉದಯನಿಧಿ ಅವರನ್ನು ಅವರು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರನ್ನಾಗಿ ಮಾಡಲಾಯಿತು. ಇದನ್ನೂ ಓದಿ: ಹಾಳಾಗುತ್ತಿದೆ ಯುವಜನತೆಯ ಆರೋಗ್ಯ – 60 ಅಲ್ಲ 30 ರಲ್ಲೇ ಬೈಪಾಸ್ ಸರ್ಜರಿ
2026ರ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಉದಯನಿಧಿ ಅವರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಏರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗಲೇ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದರೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದು ತಿಳಿಸಿದ್ದಾರೆ
ಉದಯನಿಧಿ ಅವರು ಕ್ರೀಡಾ ಮತ್ತು ಯುವ ಕಲ್ಯಾಣ ಸಚಿವರಾಗಿರುವುದರ ಜೊತೆಗೆ ವಿಶೇಷ ಕಾರ್ಯಕ್ರಮ ಅನುಷ್ಠಾನದ ಪ್ರಮುಖ ಖಾತೆಯನ್ನು ನಿಭಾಯಿಸುತ್ತಾರೆ.