ಮುಂಬೈ: ಗಡಿ ವಿವಾದಕ್ಕೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಮತ್ತೊಂದು ಟ್ವಿಸ್ಟ್ ನೀಡಲು ಪ್ರಯತ್ನಿಸಿದ್ದಾರೆ. ಕರ್ನಾಟಕ ಚುನಾವಣೆ (Karnataka Election) ಗೆಲ್ಲಲು ಬಿಜೆಪಿಯೇ ಮಹಾರಾಷ್ಟ್ರದ ಗ್ರಾಮಗಳನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರವನ್ನು (Maharashtra) ಅಸ್ಥಿರಗೊಳಿಸುವ ಸಂಚನ್ನು ಬಿಜೆಪಿ (BJP) ನಡೆಸ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಅತ್ತ ಕರ್ನಾಟಕ ಸೇರುತ್ತೇವೆ ಅಂತಾ ಠರಾವು ಹೊರಡಿಸಿದ್ದ ಅಕ್ಕಲಕೋಟೆಯ 11 ಗ್ರಾಮಪಂಚಾಯಿತಿಗಳ ಮೇಲೆ ಶಿಂಧೆ ಸರ್ಕಾರ ಕೆಂಗಣ್ಣು ಬೀರಿದೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ 11 ಗ್ರಾಪಂಗಳ ಅಧಿಕಾರಿಗಳನ್ನು ಸೇವೆಯಿಂದ ತೆಗೆದುಹಾಕುವ ಬೆದರಿಕೆ ಹಾಕಿದೆ. ಇದನ್ನೂ ಓದಿ: ಕನ್ನಡಿಗರ ಮೇಲೆ ಶಿಂಧೆ ಸರ್ಕಾರದ ದ್ವೇಷ- ಸಿಎಂಗಳ ಸಭೆ ಕರೆದ ಅಮಿತ್ ಶಾ
Advertisement
Advertisement
ಇದರಿಂದ ಗರಂ ಆಗಿರುವ ಅಕ್ಕಲಕೋಟೆ ಕನ್ನಡಿಗರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಸಭೆ ನಡೆಸಿದ್ದಾರೆ. ಈ ಬೆದರಿಕೆಗಳ ಬಗ್ಗೆ ಆಕ್ರೋಶ ಹೊರಹಾಕಿರುವ ರಾಜ್ಯದ ಕನ್ನಡಪರ ಹೋರಾಟಗಾರರು, ಗಡಿ ಕನ್ನಡಿಗರ ರಕ್ಷಣೆಗಾಗಿ ಬೊಮ್ಮಾಯಿ ಸರ್ಕಾರ ಇಬ್ಬರು ಸಚಿವರನ್ನು ಮಹಾರಾಷ್ಟ್ರಕ್ಕೆ ಕಳಿಸಬೇಕು ಎಂದು ಆಗ್ರಹಿಸಿದ್ದಾರೆ. ಮತ್ತೊಂದ್ಕಡೆ ಬೆಳಗಾವಿ ಅಧಿವೇಶನದ ವೇಳೆ ಮಹಾ ಮೇಳಾವ್ ನಡೆಸಲು ನಾಡದ್ರೋಹಿ ಎಂಇಎಸ್ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ