ಮುಂಬೈ: ಬೃಹತ್ ಮುಂಬೈ ಮಹಾನಗರಪಾಲಿಕೆ ಚುನಾವಣೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ಇಲ್ಲಿನ ಪ್ರಸಿದ್ಧ ಲಾಲ್‌ಬಾಗ್‌ಗೆ ಇಂದು ಭೇಟಿ ನೀಡಿದ ಕೇಂದ್ರ ಸಚಿವ ಅಮಿತ್ ಶಾ ಅದ್ಧೂರಿ ಗಣೇಶೋತ್ಸವ ಆಚರಣೆಯಲ್ಲಿ ಪಾಲ್ಗೊಂಡರು.
Advertisement
ಬಳಿಕ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಉದ್ಧವ್ ಠಾಕ್ರೆ ಬಿಜೆಪಿಗೆ ದ್ರೋಹ ಬಗೆದಿದ್ದಾರೆ, ಅವರಿಗೆ ಪಾಠ ಕಲಿಸಬೇಕು. ನಾವು ರಾಜಕೀಯದಲ್ಲಿ ಏನು ಬೇಕಾದರೂ ಸಹಿಸಿಕೊಳ್ಳುತ್ತೇವೆ, ಆದರೆ ದ್ರೋಹವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಅಮಿತ್ ಶಾ ಗುಡುಗಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅರ್ಶ್‌ದೀಪ್ ಪೇಜ್ ಎಡಿಟ್ – ವಿಕಿಪೀಡಿಯಾಗೆ ಸಮನ್ಸ್ ಜಾರಿ ಮಾಡಿದ ಕೇಂದ್ರ
Advertisement
Advertisement
ಬಿಜೆಪಿಗೆ ಮಾಡಿದ ದ್ರೋಹದಿಂದಲೇ ಉದ್ಧವ್ ಠಾಕ್ರೆ ಅವರ ಪಕ್ಷದಲ್ಲಿ ಒಡಕು ಉಂಟಾಗಿದ್ದು, ಅವರ ದುರಾಸೆಯಿಂದ ಮಹಾ ವಿಕಾಸ್ ಅಘಾಡಿ ಸರ್ಕಾರ ಪಥನಗೊಂಡಿತು. ಏಕನಾಥ್ ಶಿಂಧೆ ಬಂಡಾಯ ಎದ್ದು ಹೊಸ ಸರ್ಕಾರ ರಚಿಸುವಂತಾಯಿತು. ಅವರು ಬಿಜೆಪಿಗೆ ಮಾತ್ರವಲ್ಲದೇ ಸಿದ್ಧಾಂತಕ್ಕೂ ದ್ರೋಹ ಬಗೆದಿದ್ದಾರೆ. ಮಹಾರಾಷ್ಟ್ರ ಜನತೆಯೆ ಜನಾದೇಶವನ್ನು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಣೇಶಮೂರ್ತಿ ಸ್ಥಾಪಿಸಿದ ಬಿಜೆಪಿ ನಾಯಕಿ ರೂಬಿಖಾನ್‌ಗೆ ಮುಸ್ಲಿಂ ಧರ್ಮಗುರುಗಳಿಂದ ಕೊಲೆ ಬೆದರಿಕೆ
Advertisement
ಅಧಿಕಾರದ ದುರಾಸೆಯಿಂದ ಅವರ ಪಕ್ಷ ಇಂದು ಕುಗ್ಗಿದೆಯೇ ಹೊರತು ಬಿಜೆಪಿ ಅದಕ್ಕೆ ಕಾರಣವಲ್ಲ. ನಾವು ಬಹಿರಂಗವಾಗಿ ರಾಜಕೀಯ ಮಾಡುವ ಜನರೇ ಹೊರತು, ಕತ್ತಲು ಕೋಣೆಗಳಲ್ಲಿ ಮಾಡುವವರಲ್ಲ ಎಂದು ಶಾ ಪ್ರತಿಪಾದಿಸಿದ್ದಾರೆ. ಮುಂಬರುವ ಬೃಹತ್ ಮುಂಬೈ ಕಾರ್ಪೋರೇಷನ್ ಚುನಾವಣೆಯನ್ನು `ಮಿಷನ್ -150′ ಮೂಲಕ ಎದರಿಸಬಹುದು. ಬೃಹತ್‌ಮುಂಬೈ ಮಹಾನಗರಪಾಲಿಕೆ ಅತ್ಯಂತ ಶ್ರೀಮಂತ ಸಂಸ್ಥೆಯಾಗಿರುವುದರಿಂದ ಬಿಜೆಪಿ ಇದನ್ನು ದೀರ್ಘಕಾಲ ನಿಯಂತ್ರಿಸಲು ಪ್ರತ್ನಿಸುತ್ತಿದೆ ಹೇಳಿದ್ದಾರೆ ಎನ್ನಲಾಗಿದೆ.
ರಾಜಕೀಯದಲ್ಲಿ ಮೋಸ ಮಾಡುವವರಿಗೆ ಶಿಕ್ಷೆಯಾಗಬೇಕು. ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸಿ 150 ಸ್ಥಾನಗಳನ್ನು ಗೆಲ್ಲುವುದು ಬಿಜೆಪಿ ಮತ್ತು ನಿಜವಾದ ಶಿವಸೇನೆ ಮೈತ್ರಿಕೂಟದ ಗುರಿಯಾಗಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಅಕ್ರಮ ಮರಳು ಸಾಗಣೆ- ಟೋಲ್ ಗೇಟನ್ನು ಮುರಿದ 13 ಟ್ರ್ಯಾಕ್ಟರ್‌ಗಳು
ಸಭೆಯಲ್ಲಿ ಮಹಾರಾಷ್ಟç ಸಿಎಂ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿ ಮುಂಬೈ ಘಟಕದ ಮುಖ್ಯಸ್ಥ ಆಶಿಶ್ ಶೇಲಾರ್, ವಿನೋದ್ ತಾವ್ಡೆ ಮೊದಲಾದವರು ಹಾಜರಿದ್ದರು.