ಮೈಸೂರು: ಉದಯಗಿರಿ (Udayagiri) ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದ ಪ್ರಕರಣದ ಕಿಚ್ಚು ಇನ್ನೂ ಆರಿಲ್ಲ. ಪೊಲೀಸರ ತನಿಖೆ ಇನ್ನೂ ಸಾಗುತ್ತಿದೆ. ಈ ನಡುವೆಯೇ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ಜನ ಜಾಗೃತಿ ಸಮಾವೇಶ ನಡೆಸಲು ನಿರ್ಧರಿಸಿವೆ. ಕೌಂಟರ್ ಆಗಿ ದಲಿತ ಸಂಘಟನೆಗಳು ಮಾನವೀಯ ಚಳವಳಿ ಆಯೋಜಿನೆ ಮಾಡಿವೆ. ಆದರೆ ಪೊಲೀಸರು ಯಾವುದೇ ಅನುಮತಿ ನೀಡಲು ನಿರಾಕರಿಸಿದ್ದಾರೆ.
ಎರಡೂ ಸಮಾವೇಶಕ್ಕೆ ಅನುಮತಿ ನೀಡಿದರೆ ಗಲಾಟೆ ಆಗುವ ಸಾಧ್ಯತೆ ಇರುವ ಕಾರಣ ಮೈಸೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. ಈ ನಿಷೇಧಾಜ್ಞೆ ಭಾನುವಾರ ಮಧ್ಯರಾತ್ರಿಯಿಂದ ಇಂದು (ಸೋಮವಾರ) ಮಧ್ಯರಾತ್ರಿವರೆಗೂ ಜಾರಿಯಲ್ಲಿರಲಿದೆ. ಇದನ್ನೂ ಓದಿ: ಪಾಕ್ ತಂಡದ ನಸೀಮ್ ಷಾ ಶೂ ಲೇಸ್ ಕಟ್ಟಿದ ಕಿಂಗ್ ಕೊಹ್ಲಿ – ವಿರಾಟ್ ಸರಳತೆಗೆ ಸಲಾಂ ಹೊಡೆದ ಫ್ಯಾನ್ಸ್
ಉದಯಗಿರಿ ಪೊಲೀಸ್ ಠಾಣೆ ಗಲಭೆ ಪ್ರಕರಣದ ಪೊಲೀಸರಿಗೆ ದೊಡ್ಡ ಕಗ್ಗಂಟಾಗಿದೆ. ಪೊಲೀಸರಿಗೆ ಕಲ್ಲು ತೂರಿದ 980 ಪುಂಡರು ಎಲ್ಲಿದ್ದಾರೆ ಅನ್ನೋದೆ ದೊಡ್ಡ ಪ್ರಶ್ನೆಯಾಗಿದೆ. ಘಟನೆ ನಡೆದು 13 ದಿನ ಕಳೆದರೂ ಪುಂಡರು ಪೊಲೀಸರ ಕೈಗೆ ಸಿಕ್ಕಿಲ್ಲ. ಮೌಲ್ವಿಯನ್ನು ಮಾತ್ರ ಜೈಲಿಗೆ ಕಳುಹಿಸಿ ಉದಯಗಿರಿ ಪ್ರಕರಣದಲ್ಲಿ ಮೈಸೂರು ಪೊಲೀಸರು ತಣ್ಣಗಾದ್ರಾ ಅನ್ನೋ ಅನುಮಾನ ಶುರುವಾಗಿದೆ. ಇದನ್ನೂ ಓದಿ: ಶಹಬ್ಬಾಶ್ ಹುಡುಗ್ರಾ: ಪಾಕ್ ವಿರುದ್ಧ ಗೆದ್ದ ಟೀಂ ಇಂಡಿಯಾಗೆ ಡಿಕೆಶಿ ಅಭಿನಂದನೆ
ಉದಯಗಿರಿ ಠಾಣೆ ಮೇಲೆ ಸಾವಿರಕ್ಕೂ ಹೆಚ್ಚು ಜನ ಕಲ್ಲು ತೂರಾಟ ನಡೆಸಿದ್ದರು ಎನ್ನಲಾಗುತ್ತಿತ್ತು. ಅದನ್ನು ಎಫ್‌ಐಆರ್‌ನಲ್ಲೂ ಉಲ್ಲೇಖಿಸಲಾಗಿತ್ತು. ಸಿಸಿಟಿವಿಯಲ್ಲಿ ಇರುವ ಅಷ್ಟೂ ಜನ ಠಾಣೆ ಧ್ವಂಸಕ್ಕೆ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು. ಆದರೆ ಸಿಸಿಟಿವಿಯಲ್ಲಿ ಇರೋ ಅಷ್ಟು ಪುಂಡರ ಬಂಧನ ಯಾವಾಗ ಅನ್ನೋ ಕೂಗು ಕೇಳಿಬಂದಿದೆ. ಗಲಭೆಗೆ ಪ್ರಚೋದಿಸಿದ ಮೌಲ್ವಿ ಮಾತ್ರ ಜೈಲಿಗೆ ಕಳುಹಿಸಿ ಪೊಲೀಸ್ರು ಸುಮ್ಮನಾದ್ರಾ? ಅಥವಾ ಪೊಲೀಸರ ಮೇಲೆ ಯಾರಾದ್ರೂ ಒತ್ತಡ ತಂದ್ರಾ ಅನ್ನೋ ಅನುಮಾನ ಮೂಡಿದೆ. ಇದನ್ನೂ ಓದಿ: ಮಂತ್ರಾಲಯಕ್ಕೆ ಶಿವಣ್ಣ ಭೇಟಿ – ರಾಯರ ವೃಂದಾವನಕ್ಕೆ ವಿಶೇಷ ಪೂಜೆ