– ಹವಾಯ್ ಚಪ್ಪಲಿ ಧರಿಸಿರುವ ವ್ಯಕ್ತಿಯನ್ನೂ ವಿಮಾನದಲ್ಲಿ ನೋಡುವಾಸೆ ಎಂದ ಮೋದಿ
ಶಿಮ್ಲಾ: ಅತ್ಯಂತ ಕಡಿಮೆ ದರದಲ್ಲಿ ಸಣ್ಣ ನಗರಗಳ ನಡುವೆ ವಿಮಾನ ಪ್ರಯಾಣ ಮಾಡಬಹುದಾದ ಉಡಾನ್ ಯೋಜನೆಗೆ ಇಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಉಡಾನ್‍ನ ವಿಸ್ತøತ ರೂಪ ಉಡೇ ದೇಶ್ ಕಾ ಆಮ್ ನಾಗರೀಕ್. ಪ್ರದೇಶಿಕ ಸಂಪರ್ಕ ಯೋಜನೆಯಾದ ಉಡಾನ್ ಯೋಜನೆಯಡಿ ಸದ್ಯಕ್ಕೆ ಹೆಚ್ಚು ಸಂಪರ್ಕವಿರದ ಸಣ್ಣ ನಗರಗಳ ನುಡವೆ ಕಡಿಮೆ ದರದಲ್ಲಿ ಪ್ರಯಾಣ ಮಾಡಬಹುದಾಗಿದೆ. ವಿಮಾನ ಪ್ರಯಾಣ ದರವನ್ನು 500 ಕಿ.ಮೀ.ಗೆ 2500 ರೂ. ನಿಗದಿಪಡಿಸಲಾಗಿದೆ.
Advertisement
ಇಂದು ಪ್ರಧಾನಿ ಮೋದಿ ದೆಹಲಿ ಹಗೂ ಶಿಮ್ಲಾ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ್ರು. ಏರ್ ಇಂಡಿಯಾದ ಅಂಗಸಂಸ್ಥೆಯಾದ ಅಲಯನ್ಸ್ ಏರ್ ಈ ವಿಮಾನದ ನಿರ್ವಹಣೆ ಮಾಡಲಿದ್ದು, ಟಿಕೆಟ್ ದರವನ್ನು 2036 ರೂ. ಗೆ ನಿಗದಿಪಡಿಸಲಾಗಿದೆ.
Advertisement
Advertisement
ವಿಮಾನ ಹಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, ಹವಾಯ್ ಚಪ್ಪಲಿ ಧರಿಸುವಂತಹ ವ್ಯಕ್ತಿಯನ್ನೂ ಕೂಡ ವಿಮಾನದಲ್ಲಿ ನೋಡಬೇಕೆಂಬುದು ನನ್ನ ಆಸೆ ಎಂದಿದ್ದಾರೆ.
Advertisement
ಈ ಯೋಜನೆಯಡಿ 45ಕ್ಕೂ ಹೆಚ್ಚು ಸೇವೆ ಒದಗಿಸದ ವಿಮಾನ ನಿಲ್ದಾಣಗಳನ್ನು ಪುನಾರಂಭ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಉಡಾನ್ ಯೋಜನೆಯಡಿ ಸಂಪರ್ಕ ಕಲ್ಪಿಸಲಾಗುತ್ತಿರುವ ನಗರಗಳ ಪಟ್ಟಿಯಲ್ಲಿ ಬೀದರ್- ಬೆಂಗಳೂರು ಮಾರ್ಗವೂ ಇದ್ದು ಇದಕ್ಕೆ ಅನುಮೋದನೆ ಸಿಗುವುದು ಬಾಕಿ ಇದೆ ಎಂದು ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.
Tier-2 & Tier-3 cities are becoming growth engines. If aviation connectivity is enhanced in these places, it will be beneficial: PM
— PMO India (@PMOIndia) April 27, 2017