ಅಯೋಧ್ಯೆ ರಥಯಾತ್ರೆ ನಡೆಯೋವರೆಗೆ ದೇಶದೊಳಗೆ ಉಗ್ರಗಾಮಿಗಳು ಇರ್ಲಿಲ್ಲ: ವೀರಪ್ಪ ಮೊಯ್ಲಿ

Public TV
1 Min Read
VEERAPPA MOILY

ಬೆಂಗಳೂರು: ಅಯೋಧ್ಯೆ ರಥ ಯಾತ್ರೆ ನಡೆಯುವವರೆಗೆ ದೇಶದ ಒಳಗೆ ಉಗ್ರಗಾಮಿಗಳು ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದ್ದಾರೆ.

ರಾಜಸ್ಥಾನದ ಉದಯ್ ಪುರದಲ್ಲಿ ಟೈಲರ್ ಶಿರಚ್ಛೇದ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಥಯಾತ್ರೆ ನಡೆಯುವವರೆಗೆ ಡೊಮೆಸ್ಟಿಕ್ ಟೆರರಿಸಂ ಇರಲಿಲ್ಲ. ದೇಶೀಯ ಉಗ್ರಗಾಮಿ ವ್ಯವಸ್ಥೆ ಆಮೇಲೆ ಹುಟ್ಟಿಕೊಂಡಿತು. ಡೊಮೆಸ್ಟಿಕ್ ಟೆರರಿಸಂ ಮೊದಲು ಹತ್ತಿಕ್ಕಬೇಕು ಎಂದರು.

TAILOR

ಈ ಕೆಲಸ ಮೊದಲು ಆಗಬೇಕು. ತರಬೇತಿ ಕೊಡುವುದನ್ನು ಹತ್ತಿಕ್ಕಬೇಕು. ನೆಮ್ಮದಿ ಕದಡಲು ಎಲ್ಲರೂ ಕಾರಣ. ಉಗ್ರರು ಏಕೆ ಹುಟ್ಟುತ್ತಾರೆ ಎಂಬುದು ಕಾರಣ. ಪ್ರಚೋದನೆ ಎರಡೂ ಕಡೆಯಿಂದ ಬಂದಾಗ ಸಮಸ್ಯೆ ಆಗುತ್ತದೆ. ಪ್ರಚೋದನೆ ಹತ್ತಿಕ್ಕುವ ಕೆಲಸ ಮಾಡಬೇಕು ಎಂದು ಮೊಯ್ಲಿ ಆಗ್ರಹಿಸಿದರು. ಇದನ್ನೂ ಓದಿ: ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ಮತಾಂತರ ಯತ್ನ- ಕ್ರಿಶ್ಚಿಯನ್ ಮಹಿಳೆಗೆ ತರಾಟೆ

sdpi 2

ಹ್ಯಾಪಿಸೆನ್ ಇಂಡೆಕ್ಸ್ ಪಟ್ಟಿಯಲ್ಲಿ ಭಾರತ ಕುಸಿತ ಆಗುತ್ತಿದೆ. ಎಸ್ ಡಿಪಿಐ ಜನರ ನೆಮ್ಮದಿ ಕದಡುತ್ತಿದೆ. ಹೀಗೆ ಹಿಂದೂ ಸಂಘಟನೆಗಳು ಕಾರಣವಾಗುತ್ತಿವೆ. ಯುಪಿಎ ಸರ್ಕಾರ ಇದ್ದಾಗ ಹೀಗೆ ಇರಲಿಲ್ಲ. ಸರ್ದಾರ್ ಪಟೇಲರು RSS ಬ್ಯಾನ್ ಮಾಡಬೇಕೆಂದು ಹೊರಟಾಗ ನೆಹರೂ ತಡೆದರು. ಇಂದು ಆ ಸಂಘಟನೆ ಆರಾಧ್ಯ ದೈವ ಪಟೇಲರಾಗಿದ್ದಾರೆ. ಎಸ್.ಡಿ.ಪಿ.ಐ ತರದ ಸಂಘಟನೆ ಗಳನ್ನು ಬ್ಯಾನ್ ಮಾಡಬೇಕು. ಅದೆ ರೀತಿ ಹಿಂದೂ ಪ್ರಚೋದನೆಯನ್ನೂ ತಡೆಯಬೇಕು ಎಂದು ಅವರು ತಿಳಿಸಿದರು.

Live Tv

Share This Article
Leave a Comment

Leave a Reply

Your email address will not be published. Required fields are marked *