ChitradurgaCrimeDistrictsKarnatakaLatestMain Post

ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ಮತಾಂತರ ಯತ್ನ- ಕ್ರಿಶ್ಚಿಯನ್ ಮಹಿಳೆಗೆ ತರಾಟೆ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಮಲ್ಲೇಣು ಗ್ರಾಮದಲ್ಲಿ ರಾತ್ರಿ ವೇಳೆ ಮತಾಂತರಕ್ಕೆ ಯತ್ನಿಸಿರುವ ಆರೋಪವೊಂದು ಕೇಳಿಬಂದಿದೆ.

ರಾತ್ರಿ ವೇಳೆ ಹಿಂದೂಗಳನ್ನು ಕ್ರಿಶ್ಚಿಯನ್‍ಗೆ ಮತಾಂತರ ಮಾಡುತ್ತಾರೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇಳೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಅಲ್ಲದೆ ಬೈಬಲ್ ಗ್ರಂಥದ ಪ್ರತಿಗಳನ್ನು ಹರಿದು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ NDA ಅಭ್ಯರ್ಥಿಗೆ ಜೆಡಿಎಸ್ ಬೆಂಬಲ? – ಪರೋಕ್ಷ ಸುಳಿವುಕೊಟ್ಟ ಹೆಚ್‍ಡಿಕೆ

ಪ್ರಾರ್ಥನೆ ಹೇಳಿಕೊಡಲು ಬಂದಿದ್ದ ಕ್ರಿಶ್ಚಿಯನ್ ಮಹಿಳೆಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಹಗೂ ಕ್ರಿಶ್ಚಿಯನ್ ಮಹಿಳೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಹಂತ ಹಂತವಾಗಿ ಹಿರಿಯೂರು ತಾಲೂಕಿನಾದ್ಯಂತ ಮತಾಂತರ ಪ್ರಕ್ರಿಯೆ ವ್ಯಾಪಿಸುತ್ತಿದೆ.

ಈ ಘಟನೆ ಹಿರಿಯೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Live Tv

Leave a Reply

Your email address will not be published.

Back to top button