ಇದರ ಪ್ರಕಾರ, ಚಾಕು, ಕತ್ತರಿಗಳಂತಹ ಯಾವುದೇ ಹರಿತವಾದ ಉಪಕರಣಗಳನ್ನು ವಿದ್ಯಾರ್ಥಿಗಳು ಶಾಲೆಗೆ ಒಯ್ಯುವಂತಿಲ್ಲ. ವಿದ್ಯಾರ್ಥಿಗಳು ತರಗತಿಗೆ ತೆರಳುವ ವೇಳೆ ಶಿಕ್ಷಕರು ಅವರ ಬ್ಯಾಗ್ ಪರಿಶೀಲಿಸಿ ಹರಿತವಾದ ಉಪಕರಣಗಳು ಇದೆಯಾ ಎಂದು ಖಚಿತಪಡಿಸಿಕೊಂಡು ಬಳಿಕ ತರಗತಿ ಒಳಗೆ ಬಿಡಬೇಕು. ಈ ಮಾರ್ಗಸೂಚಿಯನ್ನು ಉಲ್ಲಂಘಿಸುವ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಉದಯ್‌ಪುರದಲ್ಲಿ ಸಹಪಾಠಿಗೆ ಚಾಕು ಇರಿತ – ಅಕ್ರಮವಾಗಿ ನಿರ್ಮಿಸಿದ್ದ ಆರೋಪಿ ಮನೆ ಧ್ವಂಸ
Advertisement
Advertisement
ಈ ಬಗ್ಗೆ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಆಶಿಶ್ ಮೋದಿ ಮಾತನಾಡಿ, ಪೋಷಕರು ಮಕ್ಕಳನ್ನು ಓದಲೆಂದು ಶಾಲೆಗೆ ಕಳುಹಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಶಾಲಾ ಆವರಣಗಳು ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳವಾಗಬೇಕು. ಯಾವುದೇ ರೀತಿಯ ಹಿಂಸಾಚಾರ ಇಲ್ಲಿ ನಡೆಯಬಾರದು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಇಲಾಖೆ ಈ ಮಾರ್ಗಸೂಚಿಯನ್ನು ಹೊರಡಿಸಿದೆ. ಹೊಸ ಮಾರ್ಗಸೂಚಿಯನ್ನು ಶಾಲಾ ಸೂಚನಾ ಫಲಕಗಳಲ್ಲಿ ಅಂಟಿಸಲಾಗುತ್ತದೆ ಮತ್ತು ಪ್ರಾರ್ಥನಾ ಸಭೆಗಳಲ್ಲಿ ವಿದ್ಯಾರ್ಥಿಗಳಿಗೆ ಅದರ ಬಗ್ಗೆ ತಿಳಿಸಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ನಾನು ಶುದ್ಧಹಸ್ತ ಎಂದು ಪದೇಪದೆ ಹೇಳುವ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ: ನಿಖಿಲ್ ಆಗ್ರಹ
Advertisement
ಪ್ರಕರಣ ಏನು?
ಸರ್ಕಾರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶುಕ್ರವಾರ ಕ್ಷುಲ್ಲಕ ಕಾರಣಕ್ಕೆ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದು, ಮಧುಬನ್ ಪ್ರದೇಶದಲ್ಲಿ ಕೋಮುಗಲಭೆ ಸೃಷ್ಠಿಸಿದೆ. ಘಟನೆಯ ಬಳಿಕ ಹಲವಾರು ಹಿಂದೂ ಸಂಘಟನೆಯ ಸದಸ್ಯರು ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಕನಿಷ್ಟ ಮೂರು ಕಾರುಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ಕಲ್ಲು ತೂರಾಟ ನಡೆಸಿ ಕೋಮುಗಲಭೆ ಸೃಷ್ಠಿಸಿದ್ದರು. ಇದನ್ನೂ ಓದಿ: TB Dam | ಮೂರನೇ ಸ್ಟಾಪ್ ಗೇಟ್ ಅಳವಡಿಕೆ ಯಶಸ್ವಿ – ಎಲ್ಲಾ ಗೇಟ್ ಬಂದ್
Advertisement
ಪ್ರಕರಣದಲ್ಲಿ ವಿದ್ಯಾರ್ಥಿಗಳು ವಿವಿಧ ಸಮುದಾಯದವರಾಗಿದ್ದರಿಂದ ನಗರದಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಕಾರುಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟದ ಬಳಿಕ ಗುಂಪನ್ನು ಚದುರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಬೇಕಾಯಿತು. ಇನ್ನು ಮಧುಬನ್ ಪ್ರದೇಶದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತ (BNSS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಹೇರಲಾಗಿದೆ. ಇದನ್ನೂ ಓದಿ: ಬೆಳಗ್ಗೆ ಎದ್ದರೆ ನೈತಿಕತೆ ಬಗ್ಗೆ ಮಾತನಾಡೋ ಸಿಎಂ ರಾಜೀನಾಮೆ ನೀಡಲಿ: ಜನಾರ್ದನ ರೆಡ್ಡಿ