ಮುಂಬೈ: ಉದಯಪುರ ಹತ್ಯೆ ಕುರಿತು ಬಾಲಕಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಪೋಸ್ಟ್ ನೋಡಿದ ಜಮ್ಮು ಮತ್ತು ಕಾಶ್ಮೀರದ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮತ್ತು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಜೂನ್ 28 ರಂದು ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ 15 ವರ್ಷದ ಬಾಲಕಿ ಫೇಸ್‍ಬುಕ್‍ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದಳು. ಈ ಪೋಸ್ಟ್‌ಗೆ ಪ್ರತಿಕ್ರಿಯೆ ಕೊಟ್ಟ ಜಮ್ಮು-ಕಾಶ್ಮೀರ ಮೂಲದ ವ್ಯಕ್ತಿಯೊಬ್ಬ ಕೊಲೆ ಮತ್ತು ಲೈಂಗಿಕ ಬೆದರಿಕೆಯನ್ನು ಹಾಕಿದ್ದಾನೆ. ಇದನ್ನೂ ಓದಿ: ಸರ್ಕಾರ ಬಂದ್‍ಗೆ ಯಾಕೆ ಬೆಂಬಲ ಕೊಡಬೇಕು?: ಆರಗ
Advertisement
Advertisement
ಪರಿಣಾಮ ಬಾಲಕಿ ಮತ್ತು ಆಕೆಯ ಪೋಷಕರು ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರನ್ನು ಕೊಟ್ಟಿದ್ದಾರೆ. ಈ ಹಿನ್ನೆಲೆ ಸೋಮವಾರ ಮುಂಬೈ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
ಏನಿದು ಪ್ರಕರಣ?
ವಿಪಿ ರಸ್ತೆ ಪೊಲೀಸ್ ಠಾಣೆಯ ಅಧಿಕಾರಿ ಈ ಕುರಿತು ವಿವರಿಸಿದ್ದು, ಮುಂಬೈ ಮೂಲದ ಬಾಲಕಿಗೆ ಜುಲೈ 1 ರಂದು ಮೂರು ಬೇರೆ-ಬೇರೆ ನಂಬರ್‌ಗಳಿಂದ ಕೊಲೆ ಮತ್ತು ಲೈಂಗಿಕ ಬೆದರಿಕೆ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳು ಬಂದಿದೆ. ಇದರಿಂದ ಮರುದಿನ ಆಕೆಯ ಪೋಷಕರು ಆರೋಪಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರ ವಿಶೇಷ ತಂಡವು ಆರೋಪಿ ಫಯಾಜ್ ಅಹ್ಮದ್ ಭಟ್(30)ನನ್ನು ಹುಡುಕಲು ಪ್ರಾರಂಭ ಮಾಡಿದೆ. ಈ ವೇಳೆ ಆತನನ್ನು ಉತ್ತರ ಕೇಂದ್ರಾಡಳಿತ ಪ್ರದೇಶದ ಬದ್ಗಾಮ್‍ನಿಂದ ಅಲ್ಲಿನ ಪೊಲೀಸರ ಸಹಾಯ ಪಡೆದು ಬಂಧಿಸಲಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲ ಉಕ್ರೇನ್ ಪ್ರಜೆಗಳಿಗೆ ವೇಗವಾಗಿ ರಷ್ಯಾದ ಪೌರತ್ವ ಕೊಡಲು ಮುಂದಾದ ಪುಟಿನ್
Advertisement
ಭಟ್‍ನನ್ನು ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಪ್ರಸ್ತುತ ಆತನನ್ನು ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.