– ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ
ನವದೆಹಲಿ: ಗ್ರಾಹಕರು ಐಪೋನ್ (iPhone) ಅಥವಾ ಆ್ಯಂಡ್ರಾಯ್ಡ್ ಬಳಸುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ಎರಡು ಕಂಪನಿಗಳು ಒಂದೇ ಸೇವೆಗೆ ವಿಭಿನ್ನ ದರಗಳನ್ನು ವಿಧಿಸುತ್ತಿರುವ ವರದಿಗಳ ನಂತರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಓಲಾ ಮತ್ತು ಉಬರ್‌ಗೆ (Ola Uber) ನೋಟಿಸ್ ನೀಡಿದೆ.
Advertisement
ರೈಡ್‌ಗಳನ್ನು ಬುಕ್ ಮಾಡಲು ಬಳಸುವ ಮೊಬೈಲ್ ಸಾಧನದ ಪ್ರಕಾರದ ಆಧಾರದ ಮೇಲೆ ಆಪಾದಿತ ವಿಭಿನ್ನ ಬೆಲೆಗಳ ವಿಧಿಸುವ ವರದಿಗಳ ಬಗ್ಗೆ ಸ್ಪಷ್ಟೀಕರಣವನ್ನು ಕೋರಿದೆ. ಶುಲ್ಕದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಮತ್ತು ನ್ಯಾಯೋಚಿತತೆಯನ್ನು ಖಚಿತಪಡಿಸಿಕೊಳ್ಳಲು ವಿವರವಾದ ಪ್ರತಿಕ್ರಿಯೆಯನ್ನು ಕೇಳಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೈಫ್ ಅಲಿ ಖಾನ್‌ಗೆ ಇರಿದದ್ದು ನಿಜವೇ ಅಥವಾ ನಟಿಸ್ತಿದ್ದಾರೆಯೇ? – ಬಿಜೆಪಿ ಸಚಿವ ರಾಣೆ ಲೇವಡಿ
Advertisement
Advertisement
ದೆಹಲಿ ಮೂಲದ ಉದ್ಯಮಿಯೊಬ್ಬರು ವಿಭಿನ್ನ ಸಾಧನಗಳು ಮತ್ತು ಬ್ಯಾಟರಿ ಮಟ್ಟದ ಆಧಾರದ ಮೇಲೆ ಓಬಾ ಊಬರ್ ಪ್ರತ್ಯೇಕ ಶುಲ್ಕ ನಿಗದಿಪಡಿಸುತ್ತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
Advertisement
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಊಬರ್, ಫೋನ್ ಪ್ರಕಾರವನ್ನು ಆಧರಿಸಿ ಬೆಲೆ ನಿಗದಿಪಡಿಸಲಾಗಿದೆ ಎನ್ನುವ ಆರೋಪ ಸುಳ್ಳು. ಪಿಕ್-ಅಪ್ ಪಾಯಿಂಟ್‌ಗಳು, ಆಗಮನದ ಅಂದಾಜು ಸಮಯ ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳಲ್ಲಿನ ವ್ಯತ್ಯಾಸಗಳ ಆಧಾರದ ಮೇಲೆ ದರ ನಿಗದಿಯಾಗುತ್ತದೆ. ರೈಡರ್‌ನ ಮೊಬೈಲ್ ಫೋನ್ ತಯಾರಕರ ಆಧಾರದ ಮೇಲೆ ರೈಡ್‌ನ ಬೆಲೆಯನ್ನು ವೈಯಕ್ತೀಕರಿಸುವುದಿಲ್ಲ ಎಂದು ಹೇಳಿತ್ತು. ಇದನ್ನೂ ಓದಿ: ಕಪಿಲ್ ಶರ್ಮಾ ಸೇರಿ ನಾಲ್ವರು ಬಾಲಿವುಡ್ ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಗ್ರಾಹಕ ಶೋಷಣೆಗೆ ಸರ್ಕಾರ ಶೂನ್ಯ ಸಹಿಷ್ಣುತೆ ಹೊಂದಿದ್ದು, ಸಮಗ್ರ ತನಿಖೆ ನಡೆಸಿ ಆದಷ್ಟು ಬೇಗ ವರದಿ ಸಲ್ಲಿಸುವಂತೆ ಸಿಸಿಪಿಎಗೆ ಸೂಚಿಸಲಾಗಿದೆ ಎಂದು ಜೋಶಿ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ನೋಟಿಸ್ ಜಾರಿಯಾಗಿದೆ.