ಬೆಂಗಳೂರಿನಲ್ಲಿ ಯು.ಎಸ್ ಚಾರ್ಜೆ ಡಿ ಅಫೇರ್ಸ್ ಪೆಟ್ರೀಷಿಯಾ ಲಸಿನಾ

Public TV
3 Min Read
USA INDIA

– ಬೆಂಗಳೂರಿನ 650ಕ್ಕೂ ಹೆಚ್ಚು ಅಮೇರಿಕ ಕಂಪನಿಗಳಿಂದ ಕೊಡುಗೆ

ಬೆಂಗಳೂರು: ಯು.ಎಸ್. ಮಿಷನ್ ಇಂಡಿಯಾ ಚಾರ್ಜೆ ಡಿ ಅಫೇರ್ಸ್ ಪೆಟ್ರೀಷಿಯಾ ಲಸಿನಾ ಅವರು 2022 ರಂದು ಆಗಸ್ಟ್ 10 ರಂದು ಬೆಂಗಳೂರಿನ ವಾಣಿಜ್ಯೋದ್ಯಮ ನೇತಾರರು ಮತ್ತು ಉದ್ಯಮಿಗಳನ್ನು ಭೇಟಿ ಮಾಡಿ ಅಮೇರಿಕ- ಭಾರತದ ನಡುವಿನ ಸುಭದ್ರ ಆರ್ಥಿಕ ಮತ್ತು ವಾಣಿಜ್ಯ ಒಡನಾಟದ ಬಗ್ಗೆ ಸಂವಾದ ನಡೆಸಿದರು. ಚಾರ್ಜೆ ಲಸಿನಾ ಅವರು ಸೆಪ್ಟೆಂಬರ್ 2021ರಲ್ಲಿ ಅಧಿಕಾರವಹಿಸಿಕೊಂಡಿದ್ದು, ಅವರು ಬೆಂಗಳೂರಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಸಲ.

ಚಾರ್ಜೆ ಅವರೊಂದಿಗೆ ಚೆನ್ನೈನ ಯು.ಎಸ್.ಕಾನ್ಸಲ್ ಜನರಲ್ ಜುಡಿತ್ ರೇವಿನ್ ಮತ್ತು ಯು.ಎಸ್.ನ್ಯಾಷನಲ್ ಸೈನ್ಸ್ ಫೌಂಡೇಷನ್ (ಎನ್‍ಎಸ್‍ಎಫ್)ನ ನಿರ್ದೇಶಕ ಡಾ. ಸೇತುರಾಮನ್ ಪಂಚನಾಥನ್ ಉಪಸ್ಥಿತರಿದ್ದರು. ವಾಣಿಜ್ಯ ಮತ್ತು ಉದ್ಯಮ ನಾಯಕರಿಗೆ ಆಯೋಜಿಸಿದ್ದ ಔತಣಕೂಟದಲ್ಲಿ ಚಾರ್ಜೆ ಲಸಿನಾ ಹತ್ತಾರು ಸಾವಿರ ಭಾರತದ ನಾಗರಿಕರನ್ನು ಔಪಚಾರಿಕ ವಲಯದಲ್ಲಿ ಉನ್ನತ ಗುಣಮಟ್ಟದ ಕೆಲಸದ ಪರಿಸರಗಳಲ್ಲಿ ಉದ್ಯೋಗ ನೀಡಿರುವ ಬೆಂಗಳೂರಿನಲ್ಲಿರುವ 650ಕ್ಕೂ ಹೆಚ್ಚು ಯು.ಎಸ್. ಕಂಪನಿಗಳ ಕೊಡುಗೆ ಸ್ಮರಿಸಿದ ಅವರು, ಈ ಮೂಲಕ ಆರ್ಥಿಕ ಸಂಬಂಧ ಮತ್ತು ಬಂಡವಾಳದ ಮೂಲಕವಷ್ಟೇ ಅಲ್ಲದೇ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳ ಮೂಲಕ ಮತ್ತು ಉದ್ಯೋಗಿಗಳ ಕೌಶಲ ಅಭಿವೃದ್ಧಿಗೆ ಬದ್ಧತೆಯ ಮೂಲಕ ನೀಡುತ್ತಿರುವ ಅಪಾರ ಕೊಡುಗೆಯನ್ನು ಶ್ಲಾಘಿಸಿದರು.

indian flag

ಅಧ್ಯಕ್ಷ ಬೈಡೆನ್ ಅವರು ಇತ್ತೀಚೆಗೆ ಹೇಳಿದಂತೆ ನಮ್ಮ ಜನರು, ಕೌಟುಂಬಿಕ ಬಾಂಧವ್ಯಗಳು, ಮಿತ್ರತ್ವ ಮತ್ತು ಹಂಚಿಕೊಂಡ ಮೌಲ್ಯಗಳ ಮೂಲಕ ಗಟ್ಟಿಗೊಂಡಿರುವ ಆಳವಾದ ಸಂಪರ್ಕವನ್ನು ಸಂಭ್ರಮಿಸುತ್ತಿದ್ದೇವೆ. ಯು.ಎಸ್. ಮತ್ತು ಭಾರತದ ಉದ್ಯಮಗಳ ನಡುವೆ ಈ ಸಮಾನ ಮೌಲ್ಯಗಳಿಂದಾಗಿ ಅಮೇರಿಕ ಮತ್ತು ಭಾರತದ ಕಂಪನಿಗಳು ಜತೆಯಾಗಿ ಸುಲಲಿತವಾಗಿ ಕೆಲಸ ಮಾಡುವ ಮೂಲಕ, ಆವಿಷ್ಕಾರ ಮತ್ತು ಸಮೃದ್ಧಿಯತ್ತ ಮುನ್ನಡೆಯುತ್ತಿವೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಸದೃಢ ಸಹಯೋಗವನ್ನು ವಿಸ್ತರಿಸುವ ಉದ್ದೇಶದಿಂದ ಬೆಂಗಳೂರಿಗೆ ಭೇಟಿ ನೀಡಿರುವ ಎನ್‍ಎಸ್‍ಎಫ್ ನಿರ್ದೇಶಕ ಡಾ.ಪಂಚನಾಥನ್, ಮೂಲತಃ ಚೆನ್ನೈ ನಿವಾಸಿ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಪದವೀಧರರಾಗಿರುವ ಡಾ.ಪಂಚನಾಥನ್ ಯು.ಎಸ್. ಮತ್ತು ಭಾರತದ ವಿಶ್ವವಿದ್ಯಾಲಯಗಳ ಪ್ರಯೋಗಾಲಯಗಳಲ್ಲಿ 35 ಸಹಯೋಗದ ಸಂಶೋಧನಾ ಯೋಜನೆಗಳಿಗೆ ಎನ್‍ಎಸ್‍ಎಫ್ ಅನುದಾನ ಪ್ರಕಟಿಸಲು ಭಾರತಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿಗೆ ಆಗ್ರಹಿಸಿ ಹೋರಾಟ – ಜಯಮೃತ್ಯುಂಜಯ ಸ್ವಾಮೀಜಿ ಕರೆ

ಡಾ.ಪಂಚನಾಥನ್ ಅವರ ಮಾರ್ಗದರ್ಶನದಲ್ಲಿ ವಿಸ್ತಾರ ಶ್ರೇಣಿಯ ವೈಜ್ಞಾನಿಕ ವಲಯಗಳಲ್ಲಿ ಆವಿಷ್ಕಾರದಲ್ಲಿ ಅಮೇರಿಕವನ್ನು ಮುಂಚೂಣಿಗೆ ತರುವ ಉದ್ದೇಶವನ್ನು ಎನ್‍ಎಸ್‍ಎಫ್ ಹೊಂದಿದೆ. ಎಲ್ಲ ಕ್ಷೇತ್ರಗಳಿಗೂ ಅನುದಾನ ನೀಡಿ ಬೆಂಬಲಿಸುವುದಲ್ಲದೆ, ತಂತ್ರಜ್ಞಾನ, ಆವಿಷ್ಕಾರ ಮತ್ತು ಸಹಭಾಗಿತ್ವದ ಮೂಲಕ ಸಂಶೋಧನೆಯನ್ನು ಅನ್ವಯಿಕತೆಗೆ ವಿಸ್ತರಿಸುತ್ತದೆ. ಡಾ.ಪಂಚನಾಥನ್ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಡಾ.ಎಂ.ಎ.ಗೋವಿಂದ್ ರಾವು ಫೌಂಡರ್ ಸ್ಮಾರಕ ಉಪನ್ಯಾಸ ನೀಡಿದರು.

usa flag education e1629909339303

ಚಾರ್ಜೆ ಲಸಿನಾ ಅವರು ಇದೇ ಸಂದರ್ಭದಲ್ಲಿ ಹೊಸ ಕಾನ್ಸುಲರ್ ಫಾರ್ ಕಮರ್ಷಿಯಲ್ ಅಫೇರ್ಸ್ ಕ್ಯಾರೀ ಅರುಣ್ ಅವರನ್ನು ಪರಿಚಯಿಸಿದರು. ಚೆನ್ನೈನಲ್ಲಿರುವ ಕ್ಯಾರಿ ಅರುಣ್ ಅವರು ದಕ್ಷಿಣ ಭಾರತದ ಯು.ಎಸ್. ಕಮರ್ಷಿಯಲ್ ಸರ್ವೀಸ್‍ನ ಉಸ್ತುವಾರಿ ವಹಿಸಿದ್ದು, ಅಮೇರಿಕ ಮತ್ತು ಭಾರತದ ವ್ಯಾಪಾರ ಮತ್ತು ವಾಣಿಜ್ಯ ಅವಕಾಶಗಳನ್ನು ಬೆಂಬಲಿಸಲಿದ್ದಾರೆ. ಯು.ಎಸ್. ಕಮರ್ಷಿಯಲ್ಸರ್ವೀಸ್ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿದೆ.

ಫೋಟೋ (ಬಲದಿಂದ ಎಡಕ್ಕೆ): ಬೆಂಗಳೂರಿನಲ್ಲಿ ಬುಧವಾರ ಆಗಸ್ಟ್ 10, 2022 ರಂದು ನಡೆದ ವಾಣಿಜ್ಯ ಮತ್ತು ಉದ್ಯಮ ವಲಯದ ಔತಣ ಕೂಟದಲ್ಲಿ ಯು.ಎಸ್. ಚಾರ್ಜೆ ಡಿ’ ಅಫೇರ್ಸ್ ಪೆಟ್ರೀಷಿಯಾ ಎ.ಲಸಿನಾ, ಯು.ಎಸ್.ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕ ಡಾ.ಸೇತುರಾಮನ್ ಪಂಚನಾಥನ್, ಯು.ಎಸ್.ಕಾನ್ಸಲ್ ಜನರಲ್ ಚೆನ್ನೈ ಜುಡಿತ್ ರೇವಿನ್ ಮತ್ತು ಉನ್ನತ ಶಿಕ್ಷಣ, ಐಟಿ& ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಸಿ.ಎನ್. ಅಶ್ವತ್ಧ ನಾರಾಯಣ್.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *