– ತೈವಾನ್, ಫಿಲಿಪೈನ್ಸ್‌ನಲ್ಲಿ ವ್ಯಾಪಕ ಹಾನಿ
ಹಾಂಗ್‌ಕಾಂಗ್: ರಗಾಸಾ (Ragasa) ಚಂಡಮಾರುತದ ಅಬ್ಬರಕ್ಕೆ ತೈವಾನ್, ಫಿಲಿಪೈನ್ಸ್ ಅಕ್ಷರಶಃ ತತ್ತರಿಸಿ ಹೋಗಿದ್ದು, 20ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.
ಬಿರುಗಾಳಿಗಳ ರಾಜ ಎಂದೇ ಕರೆಯುವ ರಗಾಸಾ ಚಂಡಮಾರುತವು ಫಿಲಿಪೈನ್ಸ್, ತೈವಾನ್, ಹಾಂಗ್‌ಕಾಂಗ್ ಮತ್ತು ದಕ್ಷಿಣ ಚೀನಾವನ್ನು ವ್ಯಾಪಿಸಿದೆ. ಸದ್ಯ ಈ ದೇಶಗಳಲ್ಲಿ ಒಟ್ಟಾರೆ 20 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಹುವಾಲಿಯನ್ ಕೌಂಟಿಯಲ್ಲಿ ತಡೆಗೋಡೆ ಒಡೆದ ಪರಿಣಾಮ ತೈವಾನ್‌ನಲ್ಲಿ ಕೆಸರು ಮಿಶ್ರಿತ ಪ್ರವಾಹದ ನೀರು ನುಗ್ಗಿ ಮನೆಗಳು, ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ಸುಮಾರು 8 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.ಇದನ್ನೂ ಓದಿ:ತೈವಾನ್‌ನಲ್ಲಿ ʻರಗಾಸಾʼ ಚಂಡಮಾರುತಕ್ಕೆ 14 ಬಲಿ, 124 ಮಂದಿ ಮಿಸ್ಸಿಂಗ್
ಸದ್ಯ ತೈವಾನ್ ಮತ್ತು ಫಿಲಿಪೈನ್ಸ್‌ನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತೈವಾನ್‌ನಲ್ಲಿ 14 ಜನ ಹಾಗೂ ಫಿಲಿಪೈನ್ಸ್‌ನಲ್ಲಿ 15 ಜನ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಚಂಡಮಾರುತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬೆಚ್ಚಿಬೀಳಿಸುವಂತಿದೆ. ವಿಡಿಯೋವೊಂದರಲ್ಲಿ ಹಾಂಗ್ ಕಾಂಗ್‌ನ ದೊಡ್ಡ ಹೋಟೆಲ್‌ಗೆ ನೀರು ಅಪ್ಪಳಿಸಿ, ಗಾಜು ಒಡೆದು ಹೋಗುವ ದೃಶ್ಯ ಕಂಡುಬಂದಿದೆ. ಇನ್ನೂ ಗುವಾಂಗ್‌ಡಾಂಗ್ ನಗರದ ಯಾಂಗ್‌ಜಿಯಾಂಗ್‌ನಲ್ಲಿ 50,000ಕ್ಕೂ ಹೆಚ್ಚು ಮರಗಳು ನೆಲಸಮಗೊಂಡಿದ್ದು, 56,000ಕ್ಕೂ ಮನೆಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಗಳು ಕಡಿತಗೊಂಡಿವೆ.ಇದನ್ನೂ ಓದಿ: ಸಮೀಕ್ಷೆಯಿಂದ ವಿದ್ಯುತ್ ಬಿಲ್ ವ್ಯತ್ಯಯವಾಗದು, ಗೃಹಜ್ಯೋತಿ ಫಲಾನುಭವಿಗಳಿಗೆ ತೊಂದರೆ ಇಲ್ಲ: ಬೆಸ್ಕಾಂ