ಮುಂಬೈ: ಮಹಾರಾಷ್ಟ್ರದ ಸಲಿಂಗ ಜೋಡಿಯೊಂದು ಶೀಘ್ರದಲ್ಲಿಯೇ ಹಸೆಮಣೆ ಏರಲು ಸಿದ್ದರಾಗಿದ್ದಾರೆ.
ನಾಗ್ಪುರ ಮೂಲದ ಇಬ್ಬರು ಮಹಿಳೆಯರು ಇತ್ತೀಚೆಗೆ ತಮ್ಮ ಸಂಬಂಧದ ಬಗ್ಗೆ ಬಹಿರಂಗಪಡಿಸಿದ್ದಾರೆ. ಅಲ್ಲದೇ ಕಳೆದ ವಾರ ಉಂಗುರ ಬದಲಿಸಿಕೊಳ್ಳುವ ಮೂಲಕ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಪರೋಮಿತಾ ಮುಖರ್ಜಿ ಮತ್ತು ಸುರಭಿ ಮಿತ್ರಾ ಗೋವಾದಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಮಹಿಳೆಯರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಇಲಾಖೆ ಕಾರಣ – ಕೇಂದ್ರ ಗೃಹ ಸಚಿವಾಲಯ
ಡಾ.ಪರೋಮಿತಾ ಮುಖರ್ಜಿ, ನನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ನನ್ನ ತಂದೆಗೆ 2013ರಲ್ಲಿಯೇ ತಿಳಿದಿತ್ತು. ಇತ್ತೀಚೆಗೆ ನನ್ನ ತಾಯಿಗೆ ಈ ಬಗ್ಗೆ ಹೇಳಿದಾಗ ಅವರು ಆಘಾತಕ್ಕೊಳಗಾದರು. ಆದರೆ ನಂತರ ನಾನು ಸಂತೋಷವಾಗಿರಲು ಬಯಸಿದ್ದರಿಂದ ಮದುವೆಗೆ ಒಪ್ಪಿಕೊಂಡರು ಎಂದಿದ್ದಾರೆ.
Maharashtra: Two women doctors in a ‘commitment ring ceremony’ in Nagpur last week took vows to spend their lives together as a couple
“We call this relationship ‘lifetime commitment’. We are planning our wedding in Goa,” says Paromita Mukherjee, one of the women pic.twitter.com/v4omRiLtkq
— ANI (@ANI) January 5, 2022
ಅದೇ ರೀತಿ, ಸುರಭಿ ಮಿತ್ರಾ ಕೂಡ ತನ್ನ ಕುಟುಂಬವರಿಂದ ತನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ಯಾವುದೇ ರೀತಿಯ ವಿರೋಧವನ್ನು ಎದುರಿಸಲಿಲ್ಲ. ನಿಜವಾಗಿಯೂ ನಾನು ನನ್ನ ಪೋಷಕರಿಗೆ ಈ ಬಗ್ಗೆ ಹೇಳಿದಾಗ ಅವರು ಸಂತೋಷಪಟ್ಟರು. ನಾನು ಮನೋವೈದ್ಯೆ ಮತ್ತು ಅನೇಕ ಜನರು ತಮ್ಮ ನಿಲುವನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ದ್ವಿ ಜೀವನ ನಡೆಸುವ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MESಗೆ ಪಾಠ ಕಲಿಸಲು ಕಾರ್ಮಿಕ ಸಂಘಟನೆ ಪ್ಲ್ಯಾನ್- ಇಂದಿನಿಂದ್ಲೇ ಮಹಾರಾಷ್ಟ್ರ ವಸ್ತುಗಳು ಬ್ಯಾನ್
ಇತ್ತೀಚೆಗಷ್ಟೇ ಹೈದರಾಬಾದ್‍ನ ಹೊರವಲಯದಲ್ಲಿರುವ ರೆಸಾರ್ಟ್‍ನಲ್ಲಿ ಕೋಲ್ಕತ್ತಾ ಮೂಲದ ಸುಪ್ರಿಯೊ ಚಕ್ರವರ್ತಿ(31) ಮತ್ತು ದೆಹಲಿ ಮೂಲಕ ಅಭಯ್ ಡ್ಯಾಂಗ್ (34) ಎಂಬ ಸಲಿಂಗಕಾಮಿ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ಬೆಂಗಾಲಿ ಮತ್ತು ಪಂಜಾಬಿ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹ ಮಾಡಿಕೊಂಡಿದ್ದರು. ಇದನ್ನೂ ಓದಿ: ಅದ್ದೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸಲಿಂಗಕಾಮಿ ಜೋಡಿ