ದಾವಣಗೆರೆ: ದುರ್ದೈವ ಎನ್ನುವುದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿ ತಾಯಿ-ಮಗು ಸಿಡಿಲಿಗೆ ಬಲಿಯಾಗಿದ್ದು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಹರಪನಹಳ್ಳಿ ತಾಲೂಕಿನ ಚನ್ನಳ್ಳಿ ತಾಂಡ ನಿವಾಸಿ ಕವಿತಾಬಾಯಿ (33) ಹಾಗೂ ಪವಿತ್ರಾ(12) ಮೃತ ದುರ್ದೈವಿಗಳು. ಕವಿತಾಬಾಯಿ ಅವರು ಪುಟ್ಟ ಕಂದಮ್ಮನ ಜೊತೆಗೆ ತಾಂಡಾ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ವಲ್ಪ ಪ್ರಮಾಣದಲ್ಲಿ ಮಳೆ ಕಾಣಿಸಿಕೊಂಡಿದೆ. ಇದರಿಂದಾಗಿ ಮಗಳ ಜೊತೆಗೆ ಮನೆಗೆ ಮರಳುತ್ತಿದ್ದಾಗ, ದಿಢೀರ್ ಸಿಡಿಲು ಬಡಿದ ಪರಿಣಾಮ ತಾಯಿ ಮಗಳು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Advertisement
ಈ ಕುರಿತು ಮಾಹಿತಿ ಪಡೆದು, ಸ್ಥಳಕ್ಕೆ ಆಗಮಿಸಿದ ಹರಪನಹಳ್ಳಿ ಪೊಲೀಸರು ಹಾಗೂ ತಹಶೀಲ್ದಾರ್ ಭೇಟಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv