ವಾಷಿಂಗ್ಟನ್: ರಷ್ಯಾ ಸೈನಿಕರ ವಿರುದ್ಧ ಸ್ವಯಂಸೇವಕ ಹೋರಾಟಗಾರರಾಗಿ ಉಕ್ರೇನ್‍ಗೆ ಹೋಗಿದ್ದ ಇಬ್ಬರು ಯುಎಸ್ ಪ್ರಜೆಗಳು ಒಂದು ವಾರದಿಂದ ನಾಪತ್ತೆಯಾಗಿದ್ದಾರೆ.
ಅಲಬಾಮಾದ ಟಸ್ಕಲೂಸಾದ ಅಲೆಕ್ಸಾಂಡರ್ ಡ್ರೂಕ್(39) ಮತ್ತು ಅಲಬಾಮಾದ ಹಾಟ್ರ್ಸೆಲ್ಲೆಯ ಆಂಡಿ ಹುಯ್ನ್(27) ನಾಪತ್ತೆಯಾಗಿರುವ ಯುಎಸ್ ಪ್ರಜೆಗಳು. ಇವರಿಬ್ಬರು ಜೂನ್ 8 ರಂದು ತಮ್ಮ ಕುಟುಂಬಗಳೊಂದಿಗೆ ಕೊನೆಯದಾಗಿ ಮಾತನಾಡಿದ್ದು, ಇಲ್ಲಿವರೆಗೂ ಅವರ ಕುರಿತು ಯಾವುದೇ ಅಪ್ಡೇಟ್‍ಗಳು ತಿಳಿದುಬಂದಿಲ್ಲ. ಅಲ್ಲದೇ ಅವರು ಪೂರ್ವ ಉಕ್ರೇನ್‍ನ ಖಾರ್ಕಿವ್ ಪ್ರದೇಶದಿಂದ ಹಿಂತಿರುಗಿಲ್ಲ ಎಂಬುದು ಕುಟುಂಬಗಳಿಗೆ ತಿಳಿದುಬಂದಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಒಂಟಿ ಮಹಿಳೆಯನ್ನ ಭೀಕರವಾಗಿ ಹತ್ಯೆಗೈದು ಪರಾರಿಯಾದ ಪಾಪಿಗಳು
ಈ ಹಿನ್ನೆಲೆ ಯುಎಸ್ ಯೋಧರ ಕುಟುಂಬದವರು ಅವರಿಬ್ಬರನ್ನು ರಷ್ಯಾ ಸೇನೆ ಸೆರೆ ಹಿಡಿದಿದೆ ಎಂದು ಆರೋಪಿಸುತ್ತಿದ್ದಾರೆ. ಶ್ವೇತಭವನದ ರಾಷ್ಟ್ರೀಯ ಭದ್ರತಾ ವಕ್ತಾರ ಜಾನ್ ಕಿರ್ಬಿ ಅವರು, ಒಂದು ವೇಳೆ ರಷ್ಯಾದವರು ನಮ್ಮ ಪ್ರಜೆಗಳನ್ನು ಖೈದಿಗಳನ್ನಾಗಿ ಮಾಡಿಕೊಂಡಿದ್ರೆ, ನಾವು ಅವರನ್ನು ಮರಳಿ ಪಡೆಯಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.
ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ಈ ಕುರಿತು ಮಾತನಾಡಿದ್ದು, ಈ ಕುರಿತು ಯಾವುದೇ ರೀತಿಯ ವರದಿಗಳು ಇಲ್ಲಿವರೆಗೂ ಸಿಕ್ಕಿಲ್ಲ. ಅವರ ಬಗ್ಗೆ ನಮಗೆ ದೃಢವಾಗಿ ಏನೂ ತಿಳಿದಿಲ್ಲ. ಆದರೆ ಅವರಿಬ್ಬರನ್ನು ಎಲ್ಲ ಕಡೆ ಹುಡುಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಅಲ್ಲದೇ ರಷ್ಯಾದ ಅಧ್ಯಕ್ಷ ಪುಟಿನ್ ಫೆ.24 ರಂದು ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶಿಸಿದ್ದರು. ನಂತರ ಅವರ ಸೇನೆ ಯಾರನ್ನು ಕೈದಿಗಳಾಗಿ ಮಾಡಿಕೊಂಡಿಲ್ಲ. ಒಂದು ವೇಳೆ ಅವರು ಕೈದಿಗಳಾಗಿ ತೆಗೆದುಕೊಂಡಿದ್ರೆ ಅದರಲ್ಲಿ ಯುಎಸ್ ಪ್ರಜೆಗಳೇ ಮೊದಲಿಗರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಡ್ಲಿ ಪಾತ್ರೆಯಲ್ಲಿ ಮಾಡಿ ‘ಚಾಕೊಲೇಟ್ ಚಿಪ್ ಕುಕೀಸ್’
ಕಳೆದ ವಾರ, ಉಕ್ರೇನ್‍ಗಾಗಿ ಹೋರಾಡುತ್ತಿರುವಾಗ ಸಿಕ್ಕಿಬಿದ್ದ ಇಬ್ಬರು ಬ್ರಿಟಿಷ್ ನಾಗರಿಕರಿಗೆ ಪ್ರತ್ಯೇಕತಾವಾದಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು.