ಕಾರವಾರ: ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.
ಬಿಹಾರ ಮೈಲದ ಪ್ರದೀಪ್ ಗುಪ್ತ (29), ಅರ್ಪಿತ್ ಬೆಹೆರಾ (30) ರಕ್ಷಣೆಗೊಳಗಾದವರಾಗಿದ್ದಾರೆ. ಇಬ್ಬರು ಸ್ನೇಹಿತರು ಗೋಕರ್ಣದ ಕುಡ್ಲೇಬೀಚಿನಲ್ಲಿ ಈಜಲು ತೆರಳಿದ್ದಾಗ ಸಮುದ್ರದ ಸುಳಿಗೆ ಸಿಲುಕಿದ್ದರು.
Advertisement
ಈ ವೇಳೆ ಅವರನ್ನು ಗಮನಿಸಿದ ಮಿಸ್ಟೇಕ್ ಗೋಕರ್ಣ ಅಡ್ವೆಂಚರ್ ಸಿಬ್ಬಂದಿ ಮತ್ತು ಲೈಫ್‌ಗಾರ್ಡ್ ಸಿಬ್ಬಂದಿ ನಾಗೇಂದ್ರ ಎಸ್ ಕೂರ್ಲೆ ಮತ್ತು ಮಂಜುನಾಥ್ ಎಸ್ ಹರಿಕಂತ್ರ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ತಕ್ಷಣ ರಕ್ಷಣೆಗೆ ಬಂದಿದ್ದು ಸ್ಪೀಡ್ ಬೋಟ್ ಮೂಲಕ ತೆರಳಿ ರಕ್ಷಣೆ ಮಾಡಿದ್ದಾರೆ.