ಬೆಂಗಳೂರು: ಹಾಡಹಗಲೇ ಇಬ್ಬರು ದರೋಡೆಕೋರರು ಹಿರಿಯ ವ್ಯಕ್ತಿಯ ಕುತ್ತಿಗೆಗೆ ಚಾಕು ಹಿಡಿದು ಹಣ ದೋಚಿದ್ದಾರೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ದರೋಡೆ ನಡೆದಿದ್ದು, ಅಸಹಾಯಕ ವೃದ್ಧ ಹಣ ಕಳೆದುಕೊಂಡು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ದರೋಡೆಕೋರರು ಚಾಕು ತೋರಿಸಿ ಹಣ ಸುಲಿಗೆ ಮಾಡಿರುವ ದೃಶ್ಯಗಳು ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ.
Advertisement
ವಿಡಿಯೋದಲ್ಲಿ ಏನಿದೆ? ತಮಿಳುನಾಡು ಮೂಲದ ವೃದ್ಧರೊಬ್ಬರು ಬೆಳಗ್ಗೆ ಚಿಕ್ಕಪೇಟೆಯ ಮೋಹನ್ ಕಾಂಪ್ಲೆಕ್ಸ್ ಗೆ ಬಂದಿದ್ದಾರೆ. ಹಿಂದಿನಿಂದ ಬಂದ ಇಬ್ಬರು ವೃದ್ಧರನ್ನು ಹಿಡಿದುಕೊಂಡಿದ್ದಾರೆ. ಒಬ್ಬ ನೇರವಾಗಿ ಕತ್ತನ್ನು ಚಾಕುವಿನಿಂದ ಲಾಕ್ ಮಾಡಿ, ಹಿಂಬದಿಯಿಂದ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಮುಂದೆ ಬಂದ ಮತ್ತೊಬ್ಬ ಒಳಗಿಸೆಯಲ್ಲಿದ್ದ ಸುಮಾರು 15 ಸಾವಿರ ರೂ. ಹಣವನ್ನು ತೆಗೆದುಕೊಂಡು ಎಲ್ಲರೂ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ.
Advertisement
ಕೈಯಲ್ಲಿ ಚಾಕು ಹಿಡಿದಿದ್ದರಿಂದ ಭಯಬೀತರಾದ ವ್ಯಕ್ತಿ ಪ್ರತಿರೋಧ ತೋರಲು ಅಸಹಾಯಕ ಸ್ಥಿತಿಯಲ್ಲಿದ್ರು. ಬಸ್ ಟಿಕೆಟ್ ಖರೀದಿಸಲು ಹಣವಿಲ್ಲದಂತೆ ಎಲ್ಲವನ್ನು ದರೋಡೆಕೋರರು ಎತ್ತಿಕೊಂಡು ಪರಾರಿಯಾಗಿದ್ದಾರೆ.
Advertisement
https://youtu.be/1mSzZ7hKCLs