Friday, 20th July 2018

Recent News

ಕಳ್ಳ ಅಂತಾ ಯುವಕನನ್ನು ಮನಸೋ ಇಚ್ಚೆ ಥಳಿಸಿದ್ರು

ಮಂಡ್ಯ: ವ್ಯಕ್ತಿಗಳಿಬ್ಬರು ಸೇರಿಕೊಂಡು ಯುಕನೊಬ್ಬನಿಗೆ ಬೆಲ್ಟ್ ನಿಂದ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಮಾನವೀಯ ಘಟನೆ ಮಂಡ್ಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಇಬ್ಬರು ವ್ಯಕ್ತಿಗಳು ಯುವಕನ ಮೇಲೆ ಮಾಡುತ್ತಿರುವ ಅಮಾನವೀಯ ಹಲ್ಲೆ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಆ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಕೇಳಿ ಬರುತ್ತಿದೆ. ಹಲ್ಲೆಗೊಳಗಾಗುತ್ತಿರುವ ಯುವಕ ಲಾರಿಯನ್ನ ಕದಿಯಲು ಯತ್ನಿಸುತ್ತಿದ್ದ ಎನ್ನಲಾಗಿದ್ದು, ಹಿಡಿದು ಹಲ್ಲೆ ಮಾಡಲಾಗಿದೆ.

ಈ ಸಂಬಂಧ ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದು ಆ ಯುವಕ ನಿಜವಾಗಲು ಲಾರಿ ಕದಿಯಲು ಯತ್ನಿಸಿದ್ದೇ ಆಗಿದ್ದರೆ ಪೊಲೀಸರಿಗೆ ಒಪ್ಪಿಸಬಹುದಿತ್ತು. ಅದು ಬಿಟ್ಟು ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳಬಾರದಿತ್ತು. ಹೀಗಾಗಿ ಈ ಸಂಬಂಧ ಪೊಲೀಸರು ಹಲ್ಲೆ ನಡೆಸುತ್ತಿರುವ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ .

Leave a Reply

Your email address will not be published. Required fields are marked *