ಬೆಂಗಳೂರು: ಎರಡು ಬಿಎಂಟಿಸಿ ಬಸ್‌ಗಳಿಗೆ ಸಿಲುಕಿ ಆಟೋ ಅಪ್ಪಚ್ಚಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಬನಶಂಕರಿ (Banshankari) ಸಂಚಾರಿ ಪೊಲೀಸ್ ಠಾಣೆಯ ಸೀತಾ ಸರ್ಕಲ್ ಬಳಿ ನಡೆದಿದೆ.
ಮೃತರನ್ನು ಪ್ರಯಾಣಿಕ ವಿಷ್ಣು (80) ಎಂದು ಗುರುತಿಸಲಾಗಿದ್ದು, ಡಾಕ್ಟರ್ ಆಗಿದ್ದರು. ಇನ್ನೂ ಆಟೋ ಚಾಲಕನನ್ನು ಅನಿಲ್ ಕುಮಾರ್ ಎಂದು ತಿಳಿಯಲಾಗಿದೆ.ಇದನ್ನೂ ಓದಿ: ದಯವಿಟ್ಟು ಗಂಡಸರ ಬಗ್ಗೆ ಯೋಚಿಸಿ: ಪತ್ನಿ ದೌರ್ಜನ್ಯಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ
ಡಾ.ವಿಷ್ಣು ಗುರುವಾರ ತಮ್ಮ ಬರ್ತ್ಡೇ ಆಚರಿಸಿಕೊಂಡಿದ್ದರು. ತಂದೆಯ ಬರ್ತ್ಡೇಗಾಗಿ ವಿದೇಶದಿಂದ ಬಂದಿದ್ದ ಮಗ, ಗುರುವಾರ ವಾಪಸ್ ತೆರಳಿದ್ದರು. ಆದರೆ ಮಗ ವಿದೇಶಕ್ಕೆ ಹೋಗಿ ತಲುಪುವ ಮುನ್ನ ತಂದೆ ಮೃತಪಟ್ಟಿದ್ದಾರೆ. ಇಂದು ಆಟೋದಲ್ಲಿ ವಿಷ್ಣು ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್, ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಇಬ್ಬರು ಕೂಡ ಮೃತಪಟ್ಟಿದ್ದಾರೆ. ಇಂದಿರಾನಗರ ಡಿಪೋಗೆ ಸೇರಿದ್ದ ಬಸ್ ಇದಾಗಿದ್ದು, ಬಸ್ ಸಂಖ್ಯೆ ಏಂ57ಈ9574 ಎಂದು ತಿಳಿಯಲಾಗಿದೆ.
ಬನಶಂಕರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಗುಡ್ ನ್ಯೂಸ್ ಕೊಟ್ಟ ನಟಿ- ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿಯಾರಾ ಅಡ್ವಾಣಿ